ಮಕ್ಕಳೇ ಪ್ರಮುಖರು ನಮ್ಮ ಬಗ್ಗೆ ನಮ್ಮನ್ನು ಸಂಪರ್ಕಿಸಿ ಸಂಡೇ ಸ್ಕೂಲ್ ವೆಕೇಷನ್ ಬೈಬಲ್ ಸ್ಕೂಲ್ ಎಮ್ ವೈ ಸಿ ಎಮ್ ಯು: ತರಭೇತಿ
ನಿಮ್ಮನ್ನು ಆಶ್ಚರ್ಯಗೊಳಿಸುವಂಥಹ ವಿಷಯವು ನಮ್ಮ ಹತ್ತಿರ ಒಂದು ಇದೆ. ನೀವು ಸಂಡೇ ಸ್ಕೂಲ್ ಉಪಾಧ್ಯಾಯರಾಗಿ ಸಹಿ ಹಾಕಿದ್ದೇನೆಂದು ಆಲೋಚನೆ ಮಾಡುತ್ತಿರಬಹುದು, ಆದರೆ ಇವಾಗ ನಿಮ್ಮ ಕರ್ತವ್ಯದ ಹೆಸರು ಕೋಚ್ ಎಂಬುದಾಗಿ ಮಾರ್ಪಾಟಾಗಿದೆ! ಹೌದು ಅದು ನಿಜಾನೇ, ಈ ವರ್ಷವು ನಾವು ಬೈಬಲ್ನನ್ನು ಒಂದು ಬಾಕ್ಸಿಂಗ್ ಅಂಶದೊಂದಿಗೆ ಅಧ್ಯಯನ ಮಾಡುತ್ತಿದ್ದೇವೆ ಮತ್ತು ಕ್ರೀಡೆಗಳೊಂದಿಗೆ ಕೆಲವು ವಿನೋದವನ್ನು ಹೊಂದಿರುತ್ತೇವೆ ನಮ್ಮ ನಿರೀಕ್ಷೆಯಾಗಿರುತ್ತದೆ. ಪ್ರೀತಿಯ ಉಪಾಧ್ಯಾಯರೇ, ಈವಾಗಲೇ ಇದನ್ನು ಆರಂಭಿಸಿರಿ! ಉಪಾಧ್ಯಾಯ/ಉಪಧ್ಯಾಯಿನಿಯಾಗಿ ಇರುವದಕ್ಕೆ ಬದಲಾಗಿ ಒಬ್ಬ ಕೋಚ್ ಆಗಿರಿ ಮತ್ತು ನಿಮ್ಮ ತರಗತಿಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಿಷಯದಲ್ಲಿ ಆಳವಾಗಿ ಜಾಗೃತಿಯನ್ನು ತೆಗೆದುಕೊಳ್ಳುವದಕ್ಕೆ ಇದು ನಿಮ್ಮನ್ನು ಪ್ರೇರೇಪಿಸಿ ಸಹಾಯ ಮಾಡುವದು. ಅವರು ಒಬ್ಬ ಚಾಂಪಿಯನ್ ಆಗಲು ಅವರಲ್ಲಿ ಹೆಚ್ಚಿನ ತವಕವನ್ನು ಹುಟ್ಟಿಸಿ, ಅವರ ಆತ್ಮೀಯಕವಾದ ಪ್ರಗತಿಯನ್ನು ಹೆಚ್ಚಿಸುತ್ತದೆ.
ವಾರದಲ್ಲಿ ಮಾಡಬೇಕಾದ ಹೋಂ ವರ್ಕನ್ನು ಮಾಡಲು ನಿಮ್ಮ ವಿದ್ಯಾರ್ಥಿಗಳಿಗೆ ಸಹಾಯ ಮಾಡುವದಕ್ಕೆ ನಿಮ್ಮ ತರಗತಿಯನ್ನು ಚಿಕ್ಕ ಚಿಕ್ಕ ಗುಂಪುಗಳನ್ನಾಗಿ ವಿಭಾಗಿಸಿರಿ. ಎಲ್ಲಾ ಸಂಡೇ ಸ್ಕೂಲ್ ಕಾರ್ಯಕ್ರಮಗಳೆಲ್ಲವೂ ಸಭೆಯ ಭವನದಲ್ಲಿ ನಡೆಯುತ್ತವೆ ಮತ್ತು ವಾರದಲ್ಲಿ ಮಾಡುವದಕ್ಕೆ ಕೊಡಲು ಹೋಂ ವರ್ಕ್ ಬೇಕಾಗಿರುವದಿಲ್ಲ. ಆದರೆ, ಇದರ ಕುರಿತಾಗಿ ಕಲಿಯುವುದರ ಮೂಲಕ ನಿಮ್ಮ ವಿದ್ಯಾರ್ಥಿಗಳು ತಮ್ಮ ಜೀವನಗಳಲ್ಲಿ ಪಾಪವನ್ನು “ನಾಕೌಟ್” ಮಾಡಲು ಸಾಧ್ಯವಾಗುವದಿಲ್ಲ. ಅವರು ಖಂಡಿತವಾಗಿ “ರಿಂಗ್ನೊಳಗೆ” ಪ್ರವೇಶಿಸಲೇ ಬೇಕು ಮತ್ತು ವಾರದಲ್ಲಿ ಅವರಿಗೆ ಎದುರಾಗುವ ನಿಜವಾದ ಪಾಪದೊಂದಿಗೆ ಹೋರಾಟವನ್ನು ನಡೆಸಬೇಕು. ಯಥಾರ್ಥವಾವಗಿ, ಯಾರೂ ಅವರನ್ನು ಪರೀಕ್ಷಿಸದೇ ಅದು ಮಾಡುವದಕ್ಕೆ ಸಾಧ್ಯವಾಗುವದಿಲ್ಲ. ದಯವಿಟ್ಟು “ಅವರ ಮಾತುಗಳನ್ನು ನಂಬಬೇಡಿರಿ” ಮತ್ತು ವಿದ್ಯಾರ್ಥಿಗಳು ನೀವು ಕೊಟ್ಟಿರುವ ಕೆಲಸವನ್ನು ಮಾಡಿದಾಗ ಮಾತ್ರವೇ ಅವರನ್ನು ಅಂಗೀಕರಿಸಬೇಕು. ಈ ಕಾರ್ಯಕ್ರಮದ ವಿಷಯದಲ್ಲಿ ನೀವು ನಿರ್ಲಕ್ಷ್ಯೆ ಮಾಡಿದರೇ, ನಿಮ್ಮ ವಿದ್ಯಾರ್ಥಿಗಳು ಸುಳ್ಳು ಹೇಳುವದಕ್ಕೆ ನೀವೇ ತರಬೇತಿಗೊಳಿಸದಂಥಾಗುವದು. ಆದರೆ, ನಿಮ್ಮ ವಿದ್ಯಾರ್ಥಿಗಳಿಗೆ ನೀವು ನಿಜವಾಗಿ ತರಬೇತಿಯನ್ನು ಕೊಟ್ಟರೇ, ಅವರು ಮಾಡುವಂಥಹ ಹೋಂ ವರ್ಕನ್ನು ಪರಿಶೀಲಿಸಿರಿ. ಅವಾಗ ನೀವು ಅದ್ಭುತವಾದ ಮಾರ್ಪಾಟನ್ನು ಅವರ ಜೀವನಗಳಲ್ಲಿ ನೋಡುವಿರಿ. ಕನಿಷ್ಠ 1 ವರ್ಷದಲ್ಲಿಯೇ ಅವರ ಜೀವನಗಳಲ್ಲಿಯೇ ಒಂದು ದೊಡ್ಡ ಮಾರ್ಪಾಟನ್ನು ನೀವು ತೆಗೆದುಕೊಂಡು ಬರಬಹುದು! ನಿಮ್ಮ ವಿದ್ಯಾರ್ಥಿಗಳು ಆತ್ಮದ ಫಲವನ್ನು ಕಂಠಾ ಪಾಠ ಮಾಡದೇ ಇರಬಹುದು, ಆದರೆ ಅವರು ಅವುಗಳೊಂದಿಗೆ ಜೀವಿಸಲು ಕಲಿತುಕೊಳ್ಳುತ್ತಿರಬಹುದು!
ಈ ಚಿಕ್ಕ ಚಿಕ್ಕ ಗುಂಪುಗಳನ್ನು ಮಾಡಲು, ನಿಮ್ಮ ಕೋಚ್ಗಳಿಗೆ ಒಂದು ಕೈಪಿಡಿಯನ್ನು ನಾವು ತಯಾರು ಮಾಡಿದ್ದೇವೆ ಮತ್ತು ನಿಮ್ಮ ಮುಖ್ಯ ಕೋಚ್ಗಾಗಿ ಒಂದು ಚಿಕ್ಕ ಪುಸ್ತಕವನ್ನು ತಯಾರು ಮಾಡಿದ್ದೇವೆ. ಪ್ರತಿಯೊಂದು ಆತ್ಮದ ಫಲಕ್ಕಾಗಿ ಮತ್ತು ಪ್ರತಿಯೊಂದು ತಿಂಗಳಿಗಾಗಿ ಕೋಚ್ಗಳ ಕೈಪಿಡಿಗಳಿರುತ್ತವೆ. 3 ತಿಂಗಳುಗಳಿಗೆ ಸರಿಹೋಗುವಂಥಹ ಮನೆ ಕೆಲಸಗಳೊಂದಿಗೆ ಚಿಕ್ಕ ಪುಸ್ತಕವು ಮುಖ್ಯ ಕೋಚ್ ಹತ್ತಿರವಿರುತ್ತದೆ.
Only available as a download.
1ನೇ ಅಂಶದ ಎಲ್ಲ ಕೋಚಿಂಗ್ ಮಾಹಿತಿ ಒಂದು ಕಡೆ. ಇದನ್ನು " ಮುಖ್ಯ ಕೋಚ್. " ಗೆ ಕೊಡಿ; ಅಂಶ 1
Only available as a download.
ಇವುಗಳ್ಳನ್ನು ಪ್ರತಿ ತಿಂಗಳ ಎಲ್ಲ ಕೋಚ್ಗಳಿಗೆ ಕೊಡಿ. ಅಂಶ 1: ಪ್ರೀತಿ, ಉಲ್ಲಾಸ ಮತ್ತು ಶಾಂತಿ
ಬಹಳ ಜನ ನಾಯಕರನ್ನು ನೇಮಕಾತಿಕೊಳ್ಳಲು ಇದೊಂದು ಸವಾಲಿನಂತಿರುವದು. ಇದರಿಂದ ಚಿಕ್ಕ ಗುಂಪುಗಳಾಗಿ ಸಾಕಾದಂಥಹ ನಾಯಕರು ನಿಮ್ಮತ್ತಿರ ಇರುವರು. ಏನೇಯಾಗಲಿ, ಇದು ಕಷ್ಟಕರವಾದ ವಿಷಯವಲ್ಲ. ಸುಲಭವಾಗಿ ಕೊಚ್ಗಳನ್ನು ಕಂಡುಕೊಳ್ಳಲು ಇಲ್ಲಿ ಕೆಲವು ಆಲೋಚನೆಗಳಿವೆ :
ಮುಖ್ಯ ಕೋಚ್ನ ಪ್ರಮುಖ ಕರ್ತವ್ಯವೇನಂದರೆ ಕೋಚ್ಗಳನ್ನು ಪ್ರೇರಣೆಗೊಳಿಸುವದು. ಇದನ್ನು ಮಾಡುವದಕ್ಕೆ ಒಂದು ಪ್ರಮುಖವಾದ ವಿಧಾನವೇನಂದರೆ ತಿಂಗಳಿಗೊಂದುಸಲ ಪ್ರೇರಣಾತ್ಮಕವಾದ ಕೂಟವನ್ನಿಡುವದು. ನೀವು ಆಹಾರವನ್ನು ಕೊಡಬಹುದು, ಎಲ್ಲರು ಕಲಿತುಕೊಂಡು ಪ್ರಾರ್ಥಿಸಬಹುದು, ಕ್ರೀಡಾ ಸಮಾಚಾರವನ್ನು ನೋಡಬಹುದು ಮತ್ತು ನಮ್ಮ ಕ್ರೈಸ್ತ ಜೀವನಗಳಿಗೆ ಇದು ಯಾವರೀತಿ ಅನ್ವಯವಾಗುತ್ತದೋ ನೋಡಬಹುದು. ಇದಕ್ಕೆ ಜೋಡಿಸಿ, ಒಲಂಪಿಕ್ ಆಟಗಾರರ ಕುರಿತಾಗಿ ನೀವು ಹೆಚ್ಚಾಗಿ ಪರಿಶೀಲನೆ ಮಾಡಬಹುದು ಅಥವಾ ತಿಂಡಿ ತಿನಿಸುಗಳೊಂದಿಗೆ ಪ್ರೇರಣಾತ್ಮಕವಾದ ಕ್ರೀಡಾ ಸಂಬಂಧ ಸಿನಿಮಾಗಳನ್ನು ಸಹ ನೋಡಬಹುದು. ಆಟಗಾರರು ಹೆಚ್ಚಿನ ಕೃಷಿ ಮಾಡುವದು ಬೆಲೆಯುಳ್ಳದ್ದೋ ಎಂದು ನಿಮ್ಮ ಕೋಚ್ಗಳೊಂದಿಗೆ ಚರ್ಚಿಸಿರಿ, ಆದನಂತರ ನಿತ್ಯತ್ವವನ್ನು ಪಡೆದುಕೊಳ್ಳಲು ಮತ್ತು ಆತ್ಮೀಯಕವಾದ ಪ್ರಗತಿಗಾಗಿ ನಾವು ಇನ್ನೂ ಹೆಚ್ಚಾಗಿ ಅವರಿಗಿಂತಲೂ ಹೆಚ್ಚಾಗಿ ಕೃಷಿ ಮಾಡಬೇಕಲ್ಲವೋ? ಎಂದು ಅವರಿಗೆ ಪ್ರಶ್ನಿಸಿರಿ.
Only available as a download.
2ನೇ ಅಂಶದ ಎಲ್ಲ ಕೋಚಿಂಗ್ ಮಾಹಿತಿ ಒಂದು ಕಡೆ. ಇದನ್ನು " ಮುಖ್ಯ ಕೋಚ್. " ಗೆ ಕೊಡಿ; ಅಂಶ 2
Only available as a download.
ಇವುಗಳ್ಳನ್ನು ಪ್ರತಿ ತಿಂಗಳ ಎಲ್ಲ ಕೋಚ್ಗಳಿಗೆ ಕೊಡಿ. ಅಂಶ 2: ಸಹನೆ, ದಯೆ, ಒಳ್ಳೇತನ