ಯಾವರೀತಿ ಉಪಯೋಗಿಸಬೇಕು

ಸಂಗೀತ

ಹೊಸ ಹಾಡುಗಳನ್ನು ಹಾಡುವದರೊಂದಿಗೆ ನಿಮ್ಮ ತರಗತಿಯನ್ನು ಆರಂಭಿಸಿರಿ ಮತ್ತು ಎಲ್ಲರೂ ಕೂಡಾ ನೃತ್ಯವನ್ನು ಮಾಡುತ್ತಾ ಇರಲು ನೋಡಿಕೊಳ್ಳಿರಿ. ನಮ್ಮ ವೆಬ್ಸೈಟ್ನಿಂದ ಹಾಡುಗಳನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಹಾಡುಗಳಿಗೆ ನೃತ್ಯವನ್ನು ಕಲಿತುಕೊಳ್ಳಿರಿ ಅಥವಾ ವೀಡೀಯೋಸ್ಗಳಲ್ಲಿ ತೋರಿಸಿದಂಥೆ ಕೊರಿಯೋಗ್ರಫಿಯನ್ನು ಸಹ ನೀವು ಕಲಿತುಕೊಳ್ಳಬಹುದು.

ನಾಟಕ

ಪ್ರತಿಯೊಂದು ವಾರ ಒಂದೊಂದು ವಿನೋದಾತ್ಮಕವಾದ ನಾಟಕವನ್ನು ಮಾಡುವುದಕ್ಕೆ, ಪ್ರತಿವಾರ ಎರಡು ಪಾತ್ರೆಗಳನ್ನು ವಹಿಸುವದಕ್ಕೆ ಇಬ್ಬರು ನಟರನ್ನು ಇಟ್ಟುಕೊಳ್ಳಿರಿ: ಜ್ಞಾನವಂತನಾದ ರಾಜು ಮತ್ತು ಬುದ್ಧಿಹೀನನಾದ ರವಿ ಎಂಬುದಾಗಿ ಇಟ್ಟುಕೊಳ್ಳಿರಿ. (ನೀವು ಅವರ ಹೆಸರುಗಳನ್ನು ನಿಮಗೆ ಬೇಕಾದಂಥೆ ಇಟ್ಟುಕೊಳ್ಳಬಹುದು.) ಮೊಟ್ಟ ಮೊದಲು ಪಾಠವನ್ನು ಒಂದುಸಲ ಓದಿಕೊಳ್ಳಿರಿ ಮತ್ತು ಪಾಠದ ಅನ್ವಯಗಳೊಂದಿಗೆ ಸರಿಹೋಗುವಂಥೆ ನಾಟಕದ ಅಲೋಚನೆಗಳನ್ನು ಇನ್ನೂ ಹೆಚ್ಚಾಗಿ ವೃದ್ಧಿ ಮಾಡಿಕೊಳ್ಳಿರಿ. ಬೈಬಲ್ ಕಥೆಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳುವಂಥೆ ಮಕ್ಕಳ ಕಣ್ಣುಗಳನ್ನು ತೆರೆಯಿರಿ. ಅದೇ ಇಬ್ಬರ ನಟರನ್ನು ಪ್ರತೀ ವಾರ ಕರೆದುಕೊಂಡು ಉತ್ತಮವಾದ ಜೀವನಕ್ಕೆ ಸಂಬಂಧಿತವಾದ ನಾಟಕವನ್ನು ಸೃಷ್ಟಿಸಿಕೊಳ್ಳಿರಿ. ಅವರಿಗೆ ಜ್ಞಾನವಂತನಾದ ರಾಜು ಮತ್ತು ಬುದ್ಧಿಹೀನನಾದ ರವಿಯರನ್ನು ತಿಳಿದುಕೊಳ್ಳುತ್ತಿರುವಾಗ ಆ ವರ್ಷವೆಲ್ಲಾ ಹೆಚ್ಚಿನ ವಿನೋದವನ್ನುಂಟು ಮಾಡಿರಿ. ಸಭೆಯ ಭವನದಲ್ಲಿ ಸುಲಭವಾಗಿ ಅವರು ಧರಿಸಿಕೊಳ್ಳಲು ಮತ್ತು ತೆಗೆದಿಟ್ಟುಕೊಳ್ಳಲು ಅನುಕೂಲವಾದ ವಸ್ತ್ರಗಳನ್ನು ನೀವೇ ಸಿದ್ಧಮಾಡಿರಿ. (ಉದಾ: ಒಂದು ಟೋಪಿ ಮತ್ತು ಒಂದು ಕನ್ನಡಕವನ್ನು ತೆಗೆದಿಡಿರಿ.)

ಮುಖ್ಯ ಪಾಠ

ನೀವು ಪಾಠವನ್ನು ಪರಿಚಯ ಮಾಡಿದನಂತರ, ಬೈಬಲ್ ಕಥೆಯೊಳಗೆ ಹೋಗಿರಿ. ಸಂಪುರ್ಣ ಬೈಬಲ್ ಕಥೆಯನ್ನು ಕಂಡುಕೊಳ್ಳಲು ಬೈಬಲ್ ರೆಫರೆನ್ಸ್ಗಾಗಿ ದಯೆಮಾಡಿ ನೋಡಿರಿ, ಯಾಕಂದರೆ ಈ ಕೈಪಿಡಿಯಲ್ಲಿ ಸಂಪುರ್ಣವಾಗಿ ಮುದ್ರಿಸಲಿಲ್ಲ. ಬೈಬಲ್ ಕಥೆಯನ್ನು ಕಲಿತುಕೊಂಡನಂತರ, ಜೀವನದ ಅನ್ವಯದೊಂದಿಗೆ ಮುಖ್ಯ ಪಾಠವನ್ನು ನೀವು ಜೋಡಿಸಿ ಹೇಳಬೇಕು. ಪಾಠದ ಕೊನೆಯ ಭಾಗದಲ್ಲಿ, ಕಂಠಾ ಪಾಠದ ವಾಕ್ಯವನ್ನು ಓದಿರಿ ಮತ್ತು ನಿಮ್ಮ ವಿದ್ಯಾರ್ಥಿಗಳೊಂದಿಗೆ ಪ್ರಾರ್ಥಿಸಿ ಮುಗಿಸಿರಿ.

ವಿದ್ಯಾರ್ಥಿ ಪುಸ್ತಕಗಳು

ವಿದ್ಯಾರ್ಥಿ ಪುಸ್ತಕಗಳನ್ನು ಅಥವಾ ಪ್ರತಿಯೊಂದು ಪಾಠದ ಪುಟದ ಫೋಟೋಗಳನ್ನು ಎಲ್ಲರಿಗೆ ಹಂಚಿರಿ. ಗೊಂದಲುಗಳೊಂದಿಗೆ ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಸಹಾಯ ಮಾಡಿರಿ, ಯಾಕಂದರೆ ಸಂಡೇ ಸ್ಕೂಲ್ ಪುಸ್ತಕಗಳು ಅಷ್ಟು ಕಷ್ಟಕರವಾಗಿರದೇ ಅವು ವಿನೋದಾತ್ಮಕವಾಗಿ ಮಾಡುವಂತಿರಬೇಕು. ಅವರ ಪುಸ್ತಕಗಳ ಪುಟಗಳ ಮೇಲೆ ಅಂಟಿಸಿಕೊಳ್ಳುವಂಥಹ ಸ್ಟಿಕ್ಕರ್ಗಳು ಹೊಂದಿರಬಹುದು. ಚಿಕ್ಕ ವಿದ್ಯಾರ್ಥಿಗಳಿಗಾಗಿ, ಅವರ ಪುಸ್ತಕಗಳಲ್ಲಿನ ಪುಟಗಳನ್ನು ಬಣ್ಣಗಳಿಂದಲೂ, ಅಕ್ಕಿಯ ಕಾಳುಗಳಿಂದಲೂ, ಹತ್ತಿ ಗುಂಡುಗಳಿಂದಲೂ, ನೂಡುಲ್ಗಳಿಂದಲೂ ಅಥವಾ ಪೇಂಟ್ಗಳಿಂದಲೂ ಅಲಂಕರಿಸಬಹುದು. ದೊಡ್ಡ ವಿದ್ಯಾರ್ಥಿಗಳಿಗಾಗಿ, ಅವರ ಪುಸ್ತಕಗಳು ಡೈರಿಗಳಾಗಿಟ್ಟುಕೊಳ್ಳಬಹುದು. ಅವುಗಳ ಮೇಲೆ ಮೆಟ್ರೋ ಟಿಕೇಟ್ಗಳು, ನಾಣ್ಯಗಳು ಮತ್ತು ಇನ್ನೂ ಮುಂತಾದವುಗಳೊಂದಿಗೆ ತಮ್ಮ ಮನೆ ಕೆಲಸವನ್ನು ನೆನಪಿಸುವಂಥಹ ಯಾವುದೇ ವಸ್ತುಗಳನ್ನು ಅಂಟಿಸಿಕೊಳ್ಳಬಹುದು.

ಹೋಂ ವರ್ಕ್ ಮಾಡುವ ಕೆಲಸಗಳು (ರಿಂಗ್ನಲ್ಲಿ)

ಸಭೆಗೆ ಹಾಜರಾಗುವುದರಿಂದ ಮತ್ತು ಬೈಬಲ್ನನ್ನು ಕಂಠಾಪಾಠ ಮಾಡುವುದರಿಂದ ನಮ್ಮಲ್ಲಿ ಯಾರೂ ಚಾಂಪಿಯನ್ಯಾಗುವುದಕ್ಕೆ ಸಾಧ್ಯತೆಯಿಲ್ಲ, ನಾವು ಕೇವಲ ವಾಕ್ಯದ ಪ್ರಕಾರ ಜೀವಿಸುವುದರ ಮೂಲಕವೇ ಸಾಧ್ಯ! ಈ ಪ್ರತ್ಯೇಕವಾದ ಮನೆಗೆಲಸಗಳೊಂದಿಗೆ ಬೈಬಲ್ ವಾಕ್ಯದ ಪ್ರಕಾರ ಜೀವಿಸುವುದಕ್ಕೆ ನಿಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಿರಿ.

"ರಿಂಗುನೊಳಗೆ" ವಿಭಾಗದಲ್ಲಿ ಹೆಚ್ಚಿನ ಮಾಹಿತಿಯನ್ನು ನೋಡಿರಿ.

ಕಂಠಾ ಪಾಠ ವಾಕ್ಯದ ಆಟ

ಈ ಕಾರ್ಯಕ್ರಮದಲ್ಲಿರುವ ಎಲ್ಲಾ ಆಟಗಳು ವಾರದ ಕಂಠಾ ಪಾಠ ವಾಕ್ಯವನ್ನು ಕಲಿತುಕೊಳ್ಳುವದಕ್ಕೋಸ್ಕರ ಮಾತ್ರವೇ ಇರುತ್ತವೆ. ನಿಮಗೆ ಕೊಟಲ್ಪಟ್ಟಿರುವ ಆಟಗಳನ್ನು ಉಪಯೋಗಿಸಿರಿ ಅಥವಾ ವಾರಕ್ಕೊಂದು ಆಟವನ್ನು ಆಡುವದಕ್ಕೆ ನಿಮ್ಮ ವಿದ್ಯಾರ್ಥಿಗಳೇ ಆಟವನ್ನು ಆಯ್ಕೆ ಮಾಡಿಕೊಳ್ಳುವದಕ್ಕೋಸ್ಕರ ಅವರಿಗೆ ಅನುಮತಿಯನ್ನು ಕೊಡಿರಿ. ಆಟಕ್ಕಾಗಿ ಬೇಕಾದಂಥಹ ಸಮಯವನ್ನು ನೀವು ಮುಂದೇ ಸಿದ್ಧಮಾಡಿಟ್ಟುಕೊಳ್ಳಿರಿ.

ಪ್ರಶ್ನೋತ್ತರಗಳು (ದೊಡ್ಡ ವಿದ್ಯಾರ್ಥಿಗಳಿಗಾಗಿ)

ನಿಮ್ಮ ವಿದ್ಯಾರ್ಥಿಗಳೊಂದಿಗೆ ಚರ್ಚೆಯನ್ನುಂಟು ಮಾಡುವದರ ಕ್ರಮದಲ್ಲಿ ಪ್ರತಿಯೊಂದು ಪಾಠದಲ್ಲಿ ಮೂರು ಪ್ರಶ್ನೆಗಳು ಕೊಡಲ್ಪಟ್ಟಿರುತ್ತವೆ. ಅವು ದೊಡ್ಡ ಮಕ್ಕಳಿಗೆ ಮಾತ್ರ (13-15 ವರ್ಷದ ಮಕ್ಕಳಿಗೆ), ಆದರೆ ಚರ್ಚೆ ಮಾಡುವದಕ್ಕೆ ಚುರುಕಾಗಿರುವ ಯಾವ ವಯಸ್ಸಿನವರೊಂದಿಗೆ ನೀವು ಅವುಗಳನ್ನು ಹಾಕಿ ಪ್ರಯತ್ನಿಸಬಹುದು. ಈ ಆಲೋಚನೆಯಿಂದ ನಿಮ್ಮ ವಿದ್ಯಾರ್ಥಿಗಳು ಆಲೋಚನೆ ಮಾಡುವದಕ್ಕೆ ಆರಂಭಿಸುತ್ತಾರೆ. ಇದಕ್ಕಾಗಿ ಕೆಲಸ ಮಾಡುವ ಕ್ರಮದಲ್ಲಿ, ಅವಗಿಂದಾವಗಲೇ ನೀವು ನಿಮ್ಮ ವಿದ್ಯಾರ್ಥಿಗಳಿಗೆ ಉತ್ತರಗಳನ್ನು ಹೇಳಬಾರದು. ಆ ಅಂಶಕ್ಕಾಗಿ ಅವರು ಎಷ್ಟು ಹೋರಾಡುತ್ತಾರೋ, ಅಷ್ಟು ಹೆಚ್ಚಾಗಿ ಅವರು ಆಲೋಚನೆ ಮಾಡುತ್ತಾರೆ. ನೀವು ಒಬ್ಬ ಉಪಾಧ್ಯಾಯರಾಗಿ ಉತ್ತಮವಾದ ಕೆಲಸ ಮಾಡಬಹುದು. ಅಂಶಗಳಲ್ಲಿನ ಒಂದಾನೊಂದು ಅಂಶಕ್ಕಾಗಿ ಅವರು ನಿಜವಾಗಿ ಹೋರಾಡುತ್ತಿದ್ದರೆ, ನೀವು ಮಾಡುತ್ತಿರುವ ಕೆಲಸ ತುಂಬಾ ದೊಡ್ಡದು! ನಿಮ್ಮ ವಿದ್ಯಾರ್ಥಿಗಳು ಚರ್ಚೆ ಮಾಡಿಕೊಳ್ಳುವದನ್ನು ಸ್ವಲ್ಪ ಸಮಯದಲ್ಲಿಯೇ ಮಾಡಿ ಮುಗಿಸಬಿಟ್ಟರೇ, ಮತ್ತೇ ಅವರನ್ನು ಮಾತುಕಥೆ ಮಾಡುವದಕ್ಕೆ ಮತ್ತು ಇನ್ನೂ ಹೆಚ್ಚಾಗಿ ಆಲೋಚನೆ ಮಾಡುವದಕ್ಕೆ ನಡೆಸಿಕೊಡಿರಿ.

ಹಾಜರಾತಿ ರಿವಾರ್ಡು ಕಾರ್ಡ್

ಹಾಜರಾತಿ ರಿವಾರ್ಡನ್ನು ಹಂಚಿರಿ, ಇದರ ಮೇಲೆ ಪ್ರತಿ ವಾರದ ಪಂದ್ಯದ ಪೋಟಿಯೊಂದಿಗೆ ಕಾರ್ಡ್ ಇರುತ್ತದೆ. ವರ್ಷವೆಲ್ಲಾ ಚೆನ್ನಾಗಿ ಹಾಜರಾಗಬೇಕೆಂದು ನಿಮ್ಮ ವಿದ್ಯಾರ್ಥಿಗಳನ್ನು ಪ್ರೋತ್ಸಹಿಸಿರಿ ಮತ್ತು ಎಲ್ಲಾ ಕಾರ್ಡುಗಳನ್ನು ಸೇಕರಣೆ ಮಾಡಿರಿ! ಈ ಕಾರ್ಡುಗಳೆಲ್ಲಾ ಡೌನ್ಲೋಡ್ ಮಾಡಿಕೊಳ್ಳಲು ನಿಮಗೆ ಲಭ್ಯದಲ್ಲಿರುತ್ತವೆ ಮತ್ತು ಆಕರ್ಷಿಸುವಂಥೆ ಚೆನ್ನಾಗಿ ಇವುಗಳನ್ನು ಮುದ್ರಿಸಿರಿ. ಪ್ರತೀ ಪಾಪದೊಂದಿಗೆ ಹೋರಾಡಲು ಕೊಡುವ ಮನೆ ಕೆಲಸದ ಪಂದ್ಯಗಳ ನೆನಪಿನ ಆಟವನ್ನು ಆಡುವದಕ್ಕೂ ಈ ಕಾರ್ಡುಗಳನ್ನು ನೀವು ಉಪಯೋಗಿಸಬಹುದು.