ಪ್ರಣಾಳಿಕೆ

ಈ ಪಾಠ್ಯ ಪ್ರಣಾಳಿಕೆಯಲ್ಲಿ, "ಪರಿಶೋಧಕರು: ದೇವರ ರಾಜ್ಯವನ್ನು ಪರಿಶೋಧಿಸುವರು" ನಿಮ್ಮ ತರಗತಿಯನ್ನು ಯಶಸ್ವಿಗೊಳಿಸಲು ವಿವಿಧವಾದ ಉಪಕರಣಗಳನ್ನು ನೀವು ಕಂಡುಕೊಳ್ಳುವಿರಿ: ಪ್ರಣಾಳಿಕೆ

1. ಮುಖ್ಯ ಪಾಠ

ನಿಮ್ಮ ತರಗತಿಯನ್ನು ಇನ್ನೂ ಹೆಚ್ಚಾಗಿ ಕೇಂದ್ರೀಕರಿಸುವದಕ್ಕೋಸ್ಕರ ಮುಖ್ಯ ಪಾಠಗಳು ಮತ್ತು ಆಲೋಚನೆಗಳು ಇಲ್ಲಿವೆ.

2. ಆಟ

ಪ್ರಪಂಚದಾದ್ಯಂತ 90% ವಿದ್ಯಾರ್ಥಿಗಳು ತಮ್ಮ ತರಗತಿಗಳಲ್ಲಿ ಬೇಸರಗೊಳ್ಳುತ್ತಿದ್ದಾರೆಂದು ಅಧ್ಯಯನಗಳು ಹೇಳುತ್ತಿವೆ. ನಿಮ್ಮ ವಿದ್ಯಾರ್ಥಿಗಳು ಬೇಸರಗೊಳ್ಳದೇ ತುಂಬಾ ಚಟುವಟಿಕೆಯಿಂದ ಇರುವದಕ್ಕೆ ಆಟಗಳನ್ನು ಉಪಯೋಗಿಸಿರಿ. ಆಟದೊಂದಿಗೆ ನಿಮ್ಮ ವಿದ್ಯಾರ್ಥಿಗಳು ಆಚೆ ಈಚೆ ತಿರುಗಾಡುವದನ್ನು ನೋಡುವಿರಿ, ಅದೇ ರೀತಿಯಾಗಿ ಮುಖ್ಯ ಪಾಠದ ಮೇಲೆ ಗಮನ ಹರಿಸಲು ಅವರಿಗೆ ಸಹಾಯ ಮಾಡಿರಿ.

3. ದೃಶ್ಯ ಮಾಲೆ

ಪಾಠವನ್ನು ಪರಿಚಯ ಮಾಡುವದಕ್ಕೆ ಇದೊಂದು ವಿನೋದಾತ್ಮಕವಾದ ಮಾರ್ಗ ಅಥವಾ ಪ್ರತಿವಾರ ನೀವು ನಿಮ್ಮ ಮನೆಯಿಂದ ತೆಗೆದುಕೊಂಡು ಬರುವಂಥವುಗಳೊಂದಿಗೆ ನಿಮ್ಮ ತರಗತಿ ಇನ್ನೂ ಹೆಚ್ಚಾಗಿ ಆಸಕ್ತಿದಾಯಕವಾಗಿರಲು ನೋಡಿಕೊಳ್ಳಿರಿ.

4. ಪ್ರಶ್ನೆಗಳು

ದೊಡ್ಡ ವಿದ್ಯಾರ್ಥಿಗಳಿಗೆ ಈ ಪ್ರಶ್ನೆಗಳು ಕೊಡಲ್ಪಟ್ಟಿವೆ, ಅವರು ಸಾಮ್ಯಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದಾರೋ ಇಲ್ಲವೋ ಎನ್ನುವದನ್ನು ತಿಳಿದುಕೊಳ್ಳುವದಕ್ಕೆ ಇದು ಸಹಾಯಕವಾಗುವದು.

5. ಉತ್ತರಗಳು

ವಿದ್ಯಾರ್ಥಿಗಳ ಪುಸ್ತಕಗಳಲ್ಲಿನ ಚಟುವಟಿಕೆಗಳಿಗೆ ಪ್ರತಿಯೊಂದು ಪಾಠಕ್ಕೆ ಬಲ ಭಾಗದಲ್ಲಿ ಉತ್ತರಗಳು ಕೊಡಲ್ಪಟ್ಟಿವೆ.

ವಿದ್ಯಾರ್ಥಿ ಪುಸ್ತಕ

ವಿದ್ಯಾರ್ಥಿಗಳ ಗಮನವನ್ನು ಹರಿಸುವದಕ್ಕೆ ಉಪಾಧ್ಯಾಯರಿಗೆ ವಿದ್ಯಾರ್ಥಿಗಳ ಪುಸ್ತಕಗಳೇ ಒಳ್ಳೆಯ ಉಪಕರಣಗಳು ಮತ್ತು ತರಗತಿಯನ್ನು ವಿನೋದಾತ್ಮಕವಾದ ವಾತವರಣದಿಂದ ತುಂಬಿಸಿಕೊಳ್ಳಿರಿ.
ಆ ಪುಸ್ತಕಗಳಲ್ಲಿ ಈ ಕೆಳಗಿನ ಚಟುವಟಿಕೆಗಳೆಲ್ಲವು ಒಳಗೊಂಡಿರುತ್ತವೆ.

  • ಬೈಬಲ್ ವಾಕ್ಯ ಭಾಗ – Weಪುಸ್ತಕಗಳಲ್ಲಿ ನಾವು ಬೈಬಲ್ ವಾಕ್ಯ ಭಾಗವನ್ನು ಸೇರಿಸಿದ್ದೇವೆ. ಇದರಿಂದ ನೀವು ನಿಮ್ಮ ತರಗತಿಯಲ್ಲಿ ಸುಲಭವಾಗಿ ಎಲ್ಲರು ಸೇರಿ ಓದಬಹುದು.
  • ಕಂಠ ಪಾಠ
  • ಪಜಿಲ್ ಚಟುವಟಿಕೆ
  • ರಹಸ್ಯ ಸಂದೇಶ (ದೊಡ್ಡ ವಿದ್ಯಾರ್ಥಿಗಳಿಗೆ) - ಪ್ರತೀ ವಾರವು ರಹಸ್ಯ ಸಂದೇಶವನ್ನು ಡಿಕೋಡ್ ಮಾಡುವದಕ್ಕೆ ಕೊಟ್ಟಿರುವ ನಿಯಮಗಳನ್ನು ಪಾಲಿಸಿ ಮತ್ತು ಪ್ರತಿಯೊಬ್ಬ ವಿದ್ಯಾರ್ಥಿ ಹತ್ತಿರ ಡಿಕೋಡರ್ ಬೀಗವು ಇರುವಂಥೆ ನೋಡಿಕೊಳ್ಳಿರಿ.
  • ಮತ್ತಾಯನ ಪುಸ್ತಕವನ್ನು ಓದುವದು (ದೊಡ್ಡ ವಿದ್ಯಾರ್ಥಿಗಳಿಗೆ) - ಬೈಬಲನ್ನು ಹೆಚ್ಚಾಗಿ ಓದುವದಕ್ಕೆ ನಿಮ್ಮ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲು ನಿಮ್ಮ ಕೊಡಲ್ಪಡುವ ಹೆಚ್ಚುವರಿ ಕಾರ್ಯಕ್ರಮ. ಮತ್ತಾಯನ ಬರೆದ ಸುವಾರ್ತೆಯ ಪುಸ್ತಕವನ್ನು ಪ್ರತಿ ವಾರಕ್ಕೆ 2-3 ಅಧ್ಯಾಯಗಳಂತೆ ವಿಭಜಿಸಲ್ಪಡುವದು. ಅದರಿಂದ ವಿದ್ಯಾರ್ಥಿಗಳಿಗೆ ಆ ಪುಸ್ತಕವನ್ನು ಓದುವಂಥೆ ಮನೆ ಕೆಲಸದಂಥೆ ಕೊಟ್ಟರೆ, ಅದನ್ನು 13 ವಾರಗಳಲ್ಲಿ ಓದಿ ಮುಗಿಸುವರು. ಈ ಕಾರ್ಯಕ್ರಮದೊಂದಿಗೆ ನಿಮ್ಮ ವಿದ್ಯಾರ್ಥಿಗಳು ಯಶಸ್ವಿಯಾಗಲು ಮತ್ತು ಓದುವದಕ್ಕೆ ಮನಸ್ಸನ್ನುಂಟು ಮಾಡಲು ಉಪಾಧ್ಯಾಯರಾಗಿರುವ ನಿಮ್ಮ ಮೇಲೆ ಆಧಾರಪಟ್ಟಿರುತ್ತದೆ.

ರಹಸ್ಯ ಸಂದೇಶಗಳು ಮತ್ತು ಡಿಕೋಡರ್ ಬೀಗಡಿಕೋಡರ್

ಹಿರಿಯ ಮತ್ತು ಆಧುನಿಕ ಪುಸ್ತಕಗಳನ್ನು ಉಪಯೋಗಿಸುತ್ತಿರುವ ವಿದ್ಯಾರ್ಥಿಗಳಿಗಾಗಿ

ಪ್ರತೀ ವಾರ ದಿನದ ಪಾಠದೊಂದಿಗೆ ವ್ಯವಹರಿಸಲು ವಿದ್ಯಾರ್ಥಿಗಳಿಗೆ ರಹಸ್ಯ ಸಂದೇಶವಿರುತ್ತದೆ.

ಡಿಕೋಡರ್ ಪುಟದಲ್ಲಿ ಇನ್ನೂ ಹೆಚ್ಚಾದ ಮಾಹಿತಿಯನ್ನು ನೋಡಿರಿ.

ಕತ್ತರಿಸು ಮತ್ತು ಅಂಟಿಸು

ಕಿರಿಯ ಮತ್ತು ಮಧ್ಯಮ ಪುಸ್ತಕಗಳಿಗಾಗಿ ಸ್ಟಿಕ್ಕರ್ಗಳುಸ್ಟಿಕ್ಕರ್ಗಳನ್ನುಕತ್ತರಿಸು ಮತ್ತು ಅಂಟಿಸು

ಸಹಜವಾಗಿ ಮಕ್ಕಳೆಲ್ಲರೂ ಸ್ಟಿಕ್ಕರ್ಗಳನ್ನು ಹೆಚ್ಚಾಗಿ ಪ್ರೀತಿಸುವರು! ಚಿಕ್ಕ ಮಕ್ಕಳಿಗಾಗಿ, ಪ್ರತಿವಾರ ಅವರು ಒಂದು ಸ್ಟಿಕ್ಕರ್ನ್ನು ಕತ್ತರಿಸಿ ಮತ್ತು ಅದನ್ನು ಅವರ ಪಾಠದ ಪುಟದ ಮೇಲೆ ಅಂಟಿಸುವಂಥ ಚಟುವಟಿಕೆಯನ್ನು ನಾವು ಒದಗಿಸಿಕೊಟ್ಟಿದ್ದೇವೆ. ಚುಕ್ಕಿಗಳಿಂದ ಮುದ್ರಿಸಿರುವ ಲೈನ್ ಮಧ್ಯ ಭಾಗದಲ್ಲಿ ಮಕ್ಕಳು ಆ ಸ್ಟಿಕ್ಕರನ್ನು ಅಂಟಿಸಬೇಕು ಮತ್ತು ಆ ಚಿತ್ರಕ್ಕೆ ಬಣ್ಣವನ್ನು ಹಚ್ಚಬೇಕು. ಡೌನ್ಲೋಡ್: ಸ್ಟಿಕ್ಕರ್ಗಳು (ಠಿಜಜಿ, 1.8 ಒಃ)