ಒಂಟೆಯ ಸಾಹಸಗಳು

“ಒಂಟೆ ಸಾಹಸಗಳು”, ಎಂಬ ಹೊಸದಾದ ಮತ್ತು ಆಕರ್ಷಕವಾದ ವಿಬಿಎಸ್ ಕಾರ್ಯಕ್ರಮಕ್ಕೆ ಸ್ವಾಗತ! ಇಸ್ರಾಯೇಲ್ಯರು ಸೆರೆಯಲ್ಲಿದ್ದ ಸಮಯದಲ್ಲಿ ಮಾಡಿದ ಹಾಗೆ, ಭ್ರಷ್ಟವಾದ ಲೋಕದಲ್ಲಿ ದೇವರನ್ನು ಧೈರ್ಯವಾಗಿ ಹಿಂಬಾಲಿಸಲು ಕಲಿತುಕೊಳ್ಳುವದರಿಂದ ನಿಮ್ಮ ಮಕ್ಕಳನ್ನು ಒಂಟೆಗಳು ಹಾಗೂ ಸಾಮ್ರಾಜ್ಯಗಳ ಸಾಹಸಕ್ಕೆ ನಡೆಸಿರಿ. ಈ ಕಾರ್ಯಕ್ರಮದಲ್ಲಿ, ನಾವು ದಾನಿಯೇಲ ಮತ್ತು ಆತನ ಸ್ನೇಹಿತರಾದ ಶದ್ರಕ್, ಮೆಷೆಕ್ ಮತ್ತು ಅಬೆದ್ನೆಗೊರನ್ನು ಹಿಂಬಾಲಿಸೋಣ. ಎಸ್ತೇರ್ ರಾಣಿಯು ಸಹ 4 ನೇ ಪಾಠದಲ್ಲಿ ನಿಮ್ಮ ವಿಬಿಎಸ್ ಗೆ ಅತಿಥಿಯಾಗಿ ಬರುತ್ತಾಳೆ.
ಈ ವಿಬಿಎಸ್ ನಲ್ಲಿ ಪ್ರತಿದಿನ, ಮಕ್ಕಳು ನಿಜಜೀವನದ ಆಧುನಿಕ ತಿರುವುಗಳೊಂದಿಗೆ ತಮಾಷೆಯ ಒಂಟೆಗಳನ್ನು (ಕೈಗೊಂಬೆಗಳು ಅಥವಾ ನಟರು) ತಿಳಿದುಕೊಳ್ಳಲು ಇಷ್ಟಪಡುವರು. ಈ ವಿಬಿಎಸ್ ನ ಧ್ಯೇಯವನ್ನು ಪ್ರೋತ್ಸಾಹಪಡಿಸುವ ಮೂಲ ಆಕ್ಷನ್ ಹಾಡುಗಳನ್ನು ಕೇಳಿ ಆನಂದಿಸಿರಿ. ಪಾಠದ ಶೀರ್ಷಿಕೆಯೊಂದಿಗೆ ಸಾಗಲು ಮಕ್ಕಳಿಗೆ ತಮಾಷೆಯ ಆಕ್ಷನ್ ಕಲಿಸಿರಿ ಮತ್ತು ಅದನ್ನು ಮುಖ್ಯ ಪಾಠದಾದ್ಯಂತ ಹಾಗೂ ದಿನದಾದ್ಯಂತ ಅಭ್ಯಾಸ ಮಾಡಿಸಿರಿ. ಸುಲಭವಾಗಿ ದೊರೆಯುವ ಆರ್ಥಿಕ ಸಾಮಗ್ರಿಗಳ ಉಪಯೋಗ ಅಥವಾ ಲೋಕದ ಯಾವುದೇ ಭಾಗದಲ್ಲಾದರೂ ಸುಲಭವಾಗಿ ಪರ್ಯಾಯ ಮಾಡಿಕೊಳ್ಳಲು ಸಾಧ್ಯವಾಗುವಂಥ ಸಾಮಗ್ರಿಗಳಿಂದ ಸಾಮ್ರಾಜ್ಯದ ಕರಕುಶಲ ಸ್ಟೇಷನ್ ನಲ್ಲಿ ತಮಾಷೆಯ ಕರಕುಶಲಗಳನ್ನು ಮಾಡಿರಿ. ಅರಮನೆಯ ತರಗತಿಯಲ್ಲಿ, ಗೊಂದಲಮಯವಾದ ಜಟಿಲ ಮಾರ್ಗ ಜಾಲ ಮತ್ತು ವಿವಿಧ ಒಗಟುಗಳನ್ನು ಬಿಡಿಸುವ ಮೂಲಕ ಮಕ್ಕಳು ಸಂತೋಷಿಸುವರು. ದೊಡ್ಡ ವಯಸ್ಸಿನ ಮಕ್ಕಳಿಗೆ ಪಾಠದೊಂದಿಗೆ ನಿಜಜೀವನದ ಸಮಸ್ಯೆಗಳ ಬಗ್ಗೆ ಆಲೋಚಿಸಲು ಮತ್ತು ಪಾಠವನ್ನು ಅಭ್ಯಾಸ ಮಾಡಲು ಸಣ್ಣದಾದ ಹೋಮ್ ವರ್ಕ್ ಅಸೈನ್ಮೆಂಟ್ ಮಾಡುವ ಅವಕಾಶ ಪ್ರತಿದಿನ ಎಲ್ಲರಿಗೂ ಸಿಗುತ್ತದೆ. ದಾನಿಯೇಲ ಮತ್ತು ಎಸ್ತೇರಳನ್ನು ಭೇಟಿ ಮಾಡುವಾಗ ಮತ್ತು ಅವರಿಂದ ಸತ್ಯವೇದದ ಕಥೆಯನ್ನು ಕೇಳುವಾಗ ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ, ನಂತರ ದಾನಿಯೇಲ ಸ್ಟೇಷನ್ ನಲ್ಲಿ ಬರುವ ನಾಟಕಗಳಲ್ಲಿ ಆಸಕ್ತಿಕರವಾದ ಚಟುವಟಿಕೆ ಮಾಡುವದು ಆಸಕ್ತಿಕರವಾಗಿರುತ್ತದೆ. ಆಟಗಳಿಲ್ಲದೆ ಯಾವ ವಿಬಿಎಸ್ ಸಹ ಸಂಪೂರ್ಣವಾಗುವದಿಲ್ಲ! ತೋಟದ ಆಟಗಳು ಮತ್ತು ರಾಜಮನೆತನದ ಔತಣ ಸ್ಟೇಷನ್ ಗಳಲ್ಲಿ ಆಟಗಳು ಮತ್ತು ತಮಾಷೆಯಾಗಿ ತಿಂಡಿ ಮಾಡುವ ಆಲೋಚನೆಗಳು ಸಿಗುತ್ತವೆ. ನಿಮ್ಮ ವಿಬಿಎಸ್ ಅಲಂಕರಿಸಲು ಮತ್ತು ಇನ್ನಷ್ಟು ಸಂತೋಷದಲ್ಲಿ ಭಾಗಿಯಾಗಲು ಹೆಚ್ಚಿನ ಆಲೋಚನೆಗಳನ್ನು ತಿಳಿದುಕೊಳ್ಳಲು ಮರೆಯದಿರಿ!