ಚಾಂಪಿಯನ್ಸ್‌ ಹೋಮ್

ಪ್ರೀತಿಯ ಉಪಾಧ್ಯಾಯರೇ,
ಪ್ರಪಂಚ ವ್ಯಾಪಕವಾಗಿ ಮಕ್ಕಳಿಗೆ ಸೇವೆ ಮಾಡುತ್ತಿರುವ ಮತ್ತು ಆತನಿಗೆ ಸೇವೆಯನ್ನು ಸಲ್ಲಿಸುತ್ತಿರುವ ನಿಮ್ಮಲ್ಲಿ ಪ್ರತಿಯೊಬ್ಬರನ್ನು ದೇವರು ಆಶೀರ್ವದಿಸಬೇಕೆಂದು ನಾವು ಪ್ರಾರ್ಥಿಸುತ್ತಿದ್ದೇವೆ. ನೀವೊಂದು ಹೊಸ ಮಾರ್ಪಾಟನ್ನು ಮಾಡುತ್ತಿದ್ದೀರಿ ಮತ್ತು ನಿತ್ಯತ್ವಕ್ಕಾಗಿ ಅನೇಕ ಜೀವನಗಳನ್ನು ಮಾರ್ಪಾಟು ಮಾಡುತ್ತಿದ್ದೀರಿ!

ನಿಮ್ಮನ್ನು ಆಶ್ಚರ್ಯಗೊಳಿಸುವಂಥಹ ವಿಷಯವು ನಮ್ಮ ಹತ್ತಿರ ಒಂದು ಇದೆ. ನೀವು ಸಂಡೇ ಸ್ಕೂಲ್ ಉಪಾಧ್ಯಾಯರಾಗಿ ಸಹಿ ಹಾಕಿದ್ದೇನೆಂದು ಆಲೋಚನೆ ಮಾಡುತ್ತಿರಬಹುದು, ಆದರೆ ಇವಾಗಿ ನಿಮ್ಮ ಕರ್ತವ್ಯದ ಹೆಸರು ಕೋಚ್ ಎಂಬುದಾಗಿ ಮಾರ್ಪಾಟಾಗಿದೆ! ಹೌದು ಅದು ನಿಜಾನೇ, ಈ ವರ್ಷವು ನಾವು ಬೈಬಲ್ನನ್ನು ಒಂದು ಬಾಕ್ಸಿಂಗ್ ಅಂಶದೊಂದಿಗೆ ಅಧ್ಯಯನ ಮಾಡುತ್ತಿದ್ದೇವೆ ಮತ್ತು ಕ್ರೀಡೆಗಳೊಂದಿಗೆ ಕೆಲವು ವಿನೋದವನ್ನು ಹೊಂದಿರುತ್ತೇವೆ ನಮ್ಮ ನಿರೀಕ್ಷೆಯಾಗಿರುತ್ತದೆ. ಪ್ರೀತಿಯ ಉಪಾಧ್ಯಾಯರೇ, ಈವಾಗಲೇ ಇದನ್ನು ಆರಂಭಿಸಿರಿ! ಉಪಾಧ್ಯಾಯ/ಉಪಧ್ಯಾಯಿನಿಯಾಗಿ ಇರುವದಕ್ಕೆ ಬದಲಾಗಿ ಒಬ್ಬ ಕೋಚ್ ಆಗಿರಿ ಮತ್ತು ನಿಮ್ಮ ತರಗತಿಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವಿಷಯದಲ್ಲಿ ಆಳವಾಗಿ ಜಾಗೃತಿಯನ್ನು ತೆಗೆದುಕೊಳ್ಳುವದಕ್ಕೆ ಇದು ನಿಮ್ಮನ್ನು ಪ್ರೇರೇಪಿಸಿ ಸಹಾಯ ಮಾಡುವದು. ಅವರು ಒಬ್ಬ ಚಾಂಪಿಯನ್ ಆಗಲು ಅವರಲ್ಲಿ ಹೆಚ್ಚಿನ ತವಕವನ್ನು ಹುಟ್ಟಿಸಿ, ಅವರ ಆತ್ಮೀಯಕವಾದ ಪ್ರಗತಿಯನ್ನು ಹೆಚ್ಚಿಸುತ್ತದೆ.

ನಾವು ಆತ್ಮನ ಫಲದ ಕುರಿತಾಗಿ ಅಧ್ಯಯನ ಮಾಡುತ್ತೇವೆ. ಆದರೆ ಫಲದ ಕುರಿತಾಗಿ ಮಾತ್ರವೇ ನೋಡುವದಿಲ್ಲ, ಅದಕ್ಕೆ ವಿರುದ್ಧವಾಗಿ ಹೋರಾಡುವಂಥಹ ಶರೀರದ ಪಾಪಗಳ ವಿಷಯವಾಗಿ ಕೂಡಾ ನೋಡುತ್ತೇವೆ. ನಿಮ್ಮ ಗುರಿಯೇನೆಂದರೆ ನಿಮ್ಮ ವಿದ್ಯಾರ್ಥಿಗಳೆಲ್ಲರೂ ಚಾಂಪಿಯನ್ಗಳಾಗುವಂಥೆ ಸಹಾಯ ಮಾಡುವದಷ್ಟೇ. ಇದನ್ನು ಮಾಡುವದಕ್ಕೆ ಅವರು ಕೇವಲ ವಾಕ್ಯವನ್ನು ಕಂಠಾ ಪಾಠ ಮಾಡಿ, ಬೈಬಲ್ ಕಥೆಗಳನ್ನು ಕಲಿತುಕೊಂಡರೇ ಸಾಕಾಗದು. ಆದರೆ ಅವರು ತಮ್ಮ ದೈನಂದಿನ ಜೀವನದಲ್ಲಿನ ಕ್ರಿಯೆಗಳಲ್ಲಿ ಆತ್ಮದ ಫಲವನ್ನಿಟ್ಟು ಜೀವಿಸಬೇಕಾದಂಥ ಅವಶ್ಯಕತೆಯುಂಟು.

ಬಾಕ್ಸಿಂಗ್ ಅಂಶವನ್ನು ಉಪಯೋಗಿಸಿಕೊಂಡು, ನಿಮ್ಮ ಸಂಡೇ ಸ್ಕೂಲ್ ತರಗತಿಯಲ್ಲಿ ನಿಮ್ಮ ವಿದ್ಯಾರ್ಥಿಗಳಿರುವಾಗ ನಾವು ಅವರಿಲ್ಲಿಗೆ ಬಂದು ತರಬೇತಿಯನ್ನು ಪಡೆಯುತ್ತಿದ್ದಾರೆಂದು ಊಹಿಸಿಕೊಳ್ಳಬೇಕು. ಅವರು ಹೊರಗಡೆ ಕೆಲಸ ಮಾಡುವರು ಮತ್ತು ದೇವರ ಕುರಿತಾಗಿ ಇನ್ನೂ ಹೆಚ್ಚಾಗಿ ಕಲಿತುಕೊಳ್ಳುವರು ಮತ್ತು ಪಾಪದೊಂದಿಗೆ ಹೇಗೆ ಹೋರಾಡಬೇಕೆಂದು ತಿಳಿದುಕೊಳ್ಳುವರು. ಇವಾಗ ನಿಮ್ಮ ಸಭೆಯ ಭವನವು ಒಂದು ತರಬೇತಿಯ ಕೇಂದ್ರವೆಂದು ತಿಳಿದುಕೊಳ್ಳಿರಿ.

ನಿಮ್ಮ ವಿದ್ಯಾರ್ಥಿಗಳು ಲೋಕದಲ್ಲಿರುವಾಗ, ಅವರು ನಿಜವಾಗಿ “ರಿಂಗ್ನಲ್ಲಿ!” ಇದ್ದಾರೆಂದು ತಿಳಿದುಕೊಳ್ಳಬೇಕು. ಅವರ ಶರೀರದ ಪಾಪ ಸ್ವಭಾವದ ಆಸೆಗಳಿಗೆ ವಿರುದ್ಧವಾಗಿ ಹೋರಾಡುವಂಥಹ ಸ್ಥಳವಿದು. ಅವರ ಮನೆಗಳು ಮತ್ತು ಸ್ಕೂಲ್ಗಳು ನಿಜವಾದ ಪೋಟೀ ಸ್ಥಳಗಳು ಮತ್ತು ಬಾಕ್ಸಿಂಗ್ ಮ್ಯಾಚ್ಗಳು. ಇದರಿಂದ ಸಭೆಯ ಭವನದ ಹತ್ತಿರ, ಸರಿಯಾದ ಉತ್ತರಗಳನ್ನು ಕೊಡುವದರಲ್ಲಿ ತುಂಬಾ ಒಳ್ಳೆಯವರಾಗಿರುತ್ತೇವೆ. ಸಭೆಯ ಸಹವಾಸದಲ್ಲಿ ಕೆಲವು ಪಾಠಗಳನ್ನು ಕಲಿತುಕೊಳ್ಳುವದರಿಂದ ಅಥವಾ ಕೆಲವು ವಾಕ್ಯಗಳನ್ನು ಕಂಠಾ ಪಾಠ ಮಾಡುವದರಿಂದ ಮ್ಯಾಚ್ನಲ್ಲಿ (ಆಟದಲ್ಲಿ) ಗೆದ್ದಿದ್ದೇನೆಂದು ವಿದ್ಯಾರ್ಥಿಗಳು ಯೋಚಿಸಬಾರದು. ಅದು ಕೇವಲ ತರಬೇತಿ ಮಾತ್ರ. ನಿಜವಾದ ಹೋರಾಟ ಅವರ ಜೀವನದಲ್ಲಿದೆ. ವಾರದಲ್ಲಿ ಕಲಿತುಕೊಂಡಿರುವ ಪಾಠಗಳನ್ನು ಪ್ರಯೋಗಾತ್ಮಕವಾಗಿಟ್ಟು ಬಾಳಿದರೆ ಮಾತ್ರವೇ ಅವರು ಗೆಲ್ಲುವದಕ್ಕೆ ಸಾಧ್ಯ.

ಅವರ ಕೋಚ್ಯಾಗಿ ನಿಮ್ಮ ಕೊನೆಯ ಕರ್ತವ್ಯವೇನಂದರೆ ಅವರು ಜಯವನ್ನು ಹೊಂದಿಕೊಂಡಾಗ ಅವರಿಗೆ ರಿವಾರ್ಡನ್ನು ಮತ್ತು ಪ್ರೋತ್ಸಾಹವನ್ನು ಕೊಡಿರಿ. ಕೈಯಿಂದ ಕೊಡುವಂಥಹ ಕೆಲವು ಅವಾರ್ಡುಗಳನ್ನು ಸಿದ್ಧಮಾಡಿಕೊಳ್ಳಿರಿ. ಅವರನ್ನು ಅಪ್ಪಿಕೊಳ್ಳಿರಿ ಅಥವಾ ಪ್ರತಿಯೊಂದು “ಪಂಚ್”ಗೆ, ರೌಂಡ್ಗೆ ಅಥವಾ ಮ್ಯಾಚ್ನಲ್ಲಿ ಗೆದ್ದಾಗ ಪ್ರೋತ್ಸಾಹಕರವಾದ ಶಬ್ದಗಳಿಂದ ಅವರನ್ನು ಬಲಪಡಿಸಿರಿ. ನೀವು ತೋರಿಸುವಂಥಹ ಪ್ರವರ್ತನೆಯೇ ಒಂದು ರಿವಾರ್ಡಾಗಿ ನಿಮ್ಮ ವಿದ್ಯಾರ್ಥಿಗಳು ಅವರ ಕೋಚ್ ಎಂಬುದಾಗಿ ಭಾವಿಸಿ, ನಿಮ್ಮನ್ನು ಮೆಚ್ಚಿಸುವಂಥೆ ಮಾಡುವದು.

ಕೋಚ್ಯಾಗಿ ನೀವು ಕಾಣಿಸಿಕೊಳ್ಳಲು ವಸ್ತ್ರಗಳನ್ನು ಧರಿಸಿಕೊಳ್ಳಲು ಸ್ವಲ್ಪ ಸಮಯವನ್ನು ವೆಚ್ಚಿಸುವಿರೆಂದು ಮತ್ತು ನಿಮ್ಮ ತರಗತಿಗಳನ್ನು ಕ್ರಿಡಾ ತರಬೇತಿ ಕೇಂದ್ರಗಳಂತೆ ಅಲಂಕರಿಸಿಕೊಳ್ಳುವಿರೆಂದು ಮತ್ತು ವಿನೋದಾತ್ಮಕವಾದ ಅವಾರ್ಡ್ ಸಮಾರಾಂಭಗಳನ್ನು ಆಚರಿಸುಕೊಳ್ಳುವಿರೆಂದು ನಾವು ನಿಮ್ಮಲ್ಲಿ ನಿರೀಕ್ಷಿಸುತ್ತಿದ್ದೇವೆ. ಆತ್ಮನ ಫಲದಲ್ಲಿ ಜೀವಿಸುವಿದಾದರೆ ಖಂಡಿತವಾಗಿ ಜಯವುಂಟಾಗುವದು. ಸಾಮಾನ್ಯರಿಗಿಂತ ಹೆಚ್ಚಾಗಿ ಕೃಷಿ ಮಾಡಲು ಇಷ್ಟಪಟ್ಟು ಕ್ರೀಡೆಗಳಲ್ಲಿ ಯಾವ ರೀತಿ ಜಯವನ್ನು ಗಳಿಸುವರೋ ಅದೇ ರೀತಿ ಆತ್ಮೀಯಕವಾಗಿ ಹೊಂದುತ್ತಾರೆ. ನಿಮ್ಮ ವಿದ್ಯಾರ್ಥಿಗಳೆಲ್ಲರೂ ಚಾಂಪಿಯನ್ಗಳಾಗುವದಕ್ಕೆ ಅವರು ಹೆಚ್ಚಾಗಿ ಕೃಷಿ ಮಾಡುವದಕ್ಕೆ ನಿಮ್ಮ ವಿದ್ಯಾರ್ಥಿಗಳನ್ನು ಪ್ರೇರಿಪಸಬಹುದು. ಅವರಲ್ಲಿ ಯಾರೂ ನಂಬದಿದ್ದರೂ ನೀವು ಅವರಲ್ಲಿ ನಂಬಿಕೆಯನ್ನಿಡಬೇಕು ಮತ್ತು ಅವರ ಜೀವನಗಳಲ್ಲಿ ದೇವರು ಅದ್ಭುತ ಕಾರ್ಯಗಳು ಮಾಡುವದನ್ನು ನೋಡಿರಿ!

ಆತ್ಮನ ಫಲದಲ್ಲಿ ವಿದ್ಯಾರ್ಥಿಗಳಿಗೆ ಕೋಚಿಂಗ್ ಕೊಡುತ್ತಿರುವಾಗ, ನಮ್ಮ ಕರ್ತನಾದ ದೇವರು ನಿಮ್ಮನ್ನು ಪ್ರೇರೇಪಿಸಲಿ. ಸಂಡೇ ಸ್ಕೂಲ್ ಉಪಾಧ್ಯಾಯರ ಮೇಲಿರುವ ಎಲ್ಲಾ ಪರಿಮಿತಿಗಳನ್ನು ಮುರಿಯಲ್ಪಡಲು ಮತ್ತು ನಿಮ್ಮ ವಿದ್ಯಾರ್ಥಿಗಳ ಜೀವನಗಳಲ್ಲಿ ನೀವು ಒಬ್ಬ ನಿಜವಾದ ಕೋಚ್ಯಾಗಿರಲು ನಿಮಗಾಗಿ ನಾವು ಪ್ರಾರ್ಥಿಸುತ್ತಿದ್ದೇವೆ.

ಸಂಪನ್ಮೂಲಗಳು

ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಿ!

ಸಂಪನ್ಮೂಲಗಳ ಪುಟದಲ್ಲಿ ನಾವು ಲಭ್ಯವಿಟ್ಟಿರುವವುಗಳನ್ನು ಬಂದು ನೋಡಿರಿ... ಮತ್ತು ಅದೇ ಸಮಯದಲ್ಲಿ, ನಿಮ್ಮ ಸಂಡೆ ಸ್ಕೂಲ್ಗೆ ಬೇಕಾಗುವ ಪುಸ್ತಕಗಳನ್ನು ಮತ್ತು ಇತರ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಿಕೊಳ್ಳಿರಿ!

ಹೆಚ್ಚಾಗಿ ಓದಿರಿ

ಲೋಗೋ

ನಿಮ್ಮ ಸಂಡೆ ಸ್ಕೂಲ್ನ್ನು ವಿಶೇಷಗೊಳಿಸಲು ಈ ಉಚಿತವಾದ ಪರಿಕರಗಳನ್ನು ಉಪಯೋಗಿಸಿರಿ!

ಶಿಕ್ಷಕರಾಗಿರುವದಕ್ಕಿಂತ ಕೋಚ್ ಹಾಗೆ ಇರಿ, ಮತ್ತು ನಿಮ್ಮ ತರಗತಿಯಲ್ಲಿರುವ ಪ್ರತಿ ವಿದ್ಯಾರ್ಥಿಯ ಕುರಿತಾಗಿ ಹೆಚ್ಚಿನ ವಿವರಗಳನ್ನು ಮತ್ತು ಚಾಂಪಿಯನ್ ಆಗಲು ಅವರು ಪ್ರಯಾಸ ಪಡುತ್ತಿರುವಾಗ ಅವರ ಪ್ರಗತಿಯನ್ನು ತಿಳೀದುಕೊಳ್ಳಲು ನಿಮಗೆ ಪ್ರೇರಣೆಯನ್ನು ನೀಡುತ್ತದೆ.

ಹೆಚ್ಚಾಗಿ ಓದಿರಿ

ಹಸ್ತ ಕಲಾಕೃತಗಳು

ಹಸ್ತಕಲಾ ಕೃತ್ಯಗಳು

ಹಸ್ತಕಲಾ ಕೃತ್ಯಗಳು ತರಗತಿಯಲ್ಲಿ ಹೆಚ್ಚಿನ ಸಂತೋಷವನ್ನುಂಟು ಮಾಡುತ್ತದೆ. ನೀವು ಯಾವುದೇ ದೇಶದಲ್ಲಿದ್ದರೂ ಈ ಅಲೋಚನೆಗಳನ್ನು ಅನುಸರಿಸುವುದು ಸುಲಭವಾಗಿರುವುದು. ಉಚಿತವಾದ ನಮೂನೆಗಳನ್ನು ಡೌನ್ಲೋಡ್ ಮಾಡಿಕೊಳ್ಳಿರಿ ಮತ್ತು ಹಸ್ತಕಲಾ ಕೃತ್ಯಗಳನ್ನು ಪ್ರರಂಭಿಸಿರಿ!

ಹೆಚ್ಚಾಗಿ ಓದಿರಿ