ಸುಸ್ವಾಗತ!

ಪ್ರೀತಿಯ ಸಹೋದರ ಮತ್ತು ಸಹೋದರಿಯರೇ, ಮಕ್ಕಳೆಂದರೆ ನಮಗೂ ಮತ್ತು ದೇವರಿಗೂ ತುಂಬಾ ಬೆಲೆಯುಳ್ಳವರು. ನೀವು ಅವರನ್ನು ಕ್ರಿಸ್ತನಿಗಾಗಿ ಸಂಪಾದಿಸುವದಂಥೆ ನಿಮಗೆ ಸಹಾಯ ಮಾಡುವದೇ ನಮ್ಮ ಕರ್ತವ್ಯವಾಗಿದೆ. ಪ್ರತೀ ವರ್ಷ ಹೊಸ ಸಂಡೇ ಸ್ಕೂಲ್ ಮತ್ತು ವಿಬಿಎಸ್ಗೆ ಬೇಕಾಗುವ ಅಂಶಗಳನ್ನು ಸೃಷ್ಟಿಸುವದು ಮತ್ತು ಅವುಗಳನ್ನೆಲ್ಲಾ ಇತರ ಭಾಷೆಗಳಲ್ಲಿ ಅನುವಾದ ಮಾಡುವದರಿಂದ ಭಾರತ ದೇಶದಲ್ಲಿರುವ ಎಲ್ಲಾ ಮಕ್ಕಳು ಸುವಾರ್ತೆಯನ್ನು ಕೇಳುವಂತೆ ಮಾಡುವದೇ ನಮ್ಮ ವಿಧಾನವಾಗಿದೆ.

ಮಕ್ಕಳ ಸೇವೆ ಅನೇಕಬಾರಿ ನಿರ್ಲಕ್ಷ್ಯತೆಗೆ, ಅತೀ ಕಡಿಮೆ ಖರ್ಚಿನ ಸೇವೆ ಎಂಬುದಾಗಿ ಪರಿಗಣಿಸಲ್ಪಟ್ಟಿದೆ ಮತ್ತು ಕ್ರೈಸ್ತ ಸೇವೆಗಳಲ್ಲಿ ಅತೀ ಹೆಚ್ಚಾಗಿ ಈ ಸೇವೆಯನ್ನು ಮಾಡುತ್ತಿರುತ್ತಾರೆ. ಆದರೆ ಇನ್ನೂ ಅನೇಕ ಲಕ್ಷಾಂತರ ಮಕ್ಕಳು ಯೇಸುವಿನ ಕುರಿತಾಗಿ ಕೇಳುವ ಅವಶ್ಯಕತೆಯುಂಟು!

ಇದಕ್ಕಾಗಿಯೇ ನಾವು ನಮ್ಮ ಸಂಪುರ್ಣ ಸಮಯವನ್ನೆಲ್ಲಾ ಸಂಡೇ ಸ್ಕೂಲ್ ಮತ್ತು ವೆಕೇಷನ್ ಬೈಬಲ್ ಸ್ಕೂಲ್ಗೆ ಸಂಬಂಧಿಸಿದ ಪಠ್ಯ ಕ್ರಮಗಳನ್ನು, ತರಬೇತಿಗೆ ಬೆಕಾಗುವ ಅಗತ್ಯತೆಗಳನ್ನು ಮತ್ತು ಮಕ್ಕಳ ಸೇವೆಗಾಗಿ ಬೇಕಾಗುವ ಇನ್ನಿತರ ಸಂಪನ್ಮೂಲಗಳನ್ನು ವಾಸ್ತವಿಕವಾಗಿಯೂ, ಸಂಪುರ್ಣವಾಗಿಯೂ ತಯಾರಿಸುವದಕ್ಕೆ ವೆಚ್ಚಿಸುತ್ತಿದ್ದೇವೆ.

 

ಮಕ್ಕಳೇ ಪ್ರಮುಖರು ಭಾರತಎಂದು ನಾವು ನಂಬುತ್ತಿರುವದರಿಂದಲೇ ಇವೆಲ್ಲವನ್ನು ಮಾಡಲು ಇಚ್ಚಿಸುತ್ತಿದ್ದೇವೆ.

ಮಕ್ಕಳೇ ಪ್ರಮುಖರು

 

ನಮ್ಮ ಈ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳುವದಕ್ಕೂ, ಉಪಯೋಗಿಸಿಕೊಳ್ಳುವದಕ್ಕೂ, ಮುದ್ರಿಸಿಕೊಳ್ಳುವದಕ್ಕೂ ಮತ್ತು ಯಾವ ನಿರ್ಬಂಧಗಳಿಲ್ಲದೇ ಎಲ್ಲಾ ಸಂಸ್ಥೆಗಳಿಗೆ ಮತ್ತು ಸಭೆಗಳಿಗೆ ಹಂಚುವದಕ್ಕೂ ಉಚಿತವಾಗಿ ಕೊಡಲ್ಪಟ್ಟಿದೆ.

ನಾವು ಮೆಕ್ಸಿಕೊನಲ್ಲಿ ಇರುತ್ತೇವೆ .
52-592-924-9041
info@childrenareimportant.com