ನಿಮ್ಮ ಇಂಜಿನ್ ಪ್ರಾರಂಭಿಸಿರಿ

ಸತ್ಯವೇದದ ಪ್ರಕಾರ, ಯೇಸು ಕ್ರಿಸ್ತನೊಂದಿಗಿನ ನಮ್ಮ ಜೀವಿತ ಕೇವಲ ನಿಷ್ಕ್ರಿಯವಾದ ಕಾರ್ಯವಲ್ಲ; ಅದೊಂದು ಓಟವಾಗಿದೆ! ನಾವು ಮತ್ತು ಮಕ್ಕಳು ಗೆಲ್ಲಲು ಪ್ರಯತ್ನಿಸಬೇಕು ಹಾಗೂ ಈ ಓಟದಲ್ಲಿ ಗೆದ್ದವರಿಗೆ, ಕಳೆದುಹೋಗುವಂಥ ಅಥವಾ ತಾತ್ಕಾಲಿಕವಾದಂಥ ಬಹುಮಾನವಲ್ಲ ಬದಲಾಗಿ ನಿತ್ಯವಾದ ಬಹುಮಾನ ದೊರೆಯುತ್ತದೆ:

“ರಂಗಸ್ಥಾನದಲ್ಲಿ ಓಡುವದಕ್ಕೆ ಗೊತ್ತಾದವರೆಲ್ಲರೂ ಓಡುತ್ತಾರಾದರೂ ಒಬ್ಬನು ಮಾತ್ರ ಬಿರುದನ್ನು ಹೊಂದುತ್ತಾನೆ ಎಂಬದು ನಿಮಗೆ ತಿಳಿಯದೋ? ಅವರಂತೆ ನೀವೂ ಬಿರುದನ್ನು ಪಡಕೊಳ್ಳಬೇಕೆಂತಲೇ ಓಡಿರಿ. ಅದರಲ್ಲಿ ಹೋರಾಡುವವರೆಲ್ಲರು ಎಲ್ಲ ವಿಷಯಗಳಲ್ಲಿ ಮಿತವಾಗಿರುತ್ತಾರೆ. ಅವರು ಬಾಡಿಹೋಗುವ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆಮಾಡುತ್ತಾರೆ; ನಾವಾದರೋ ಬಾಡಿ ಹೋಗದ ಜಯಮಾಲಿಕೆಯನ್ನು ಹೊಂದುವದಕ್ಕೆ ಸಾಧನೆಮಾಡುವವರಾಗಿದ್ದೇವೆ.” 1 ಕೊರಿಂಥ 9:24-25

ನಾವು ನಮಗಿರುವ ಎಲ್ಲವುಗಳ ಮೂಲಕ ಯೇಸು ಕ್ರಿಸ್ತನನ್ನು ಹಿಂಬಾಲಿಸುತ್ತಾ ಒಂದುವೇಳೆ ಮುಂದಕ್ಕೆ ಸಾಗುವದಾದರೆ ನಮಗೆ ನಿತ್ಯವಾದ ಜಯಮಾಲಿಕೆಯು ದೊರೆಯುತ್ತದೆ! ಉತ್ತೇಜನ ಮತ್ತು ಕ್ರಿಯಾತ್ಮಕತೆಯುಳ್ಳ ಈ ವಿಬಿಎಸ್ ನಲ್ಲಿ, ಮೋಟರ್ ಸೈಕಲ್ ಓಟವನ್ನು ಯೇಸು ಕ್ರಿಸ್ತನೊಂದಿಗಿನ ನಮ್ಮ ಜೀವಿತಕ್ಕೆ ದೃಷ್ಟಾಂತವಾಗಿ ನೋಡಿಕೊಳ್ಳೋಣ.