ನಮ್ಮ ಬಗ್ಗೆ

ಮಕ್ಕಳೇ ಪ್ರಮುಖರು ಭಾರತನಾವು ಯಾರು?

ಮಕ್ಕಳೇ ಪ್ರಮುಖರು ಭಾರತ“ಮಕ್ಕಳೇ ಪ್ರಮುಖರು” ಎನ್ನುವ ಈ ಸಂಸ್ಥೆಯನ್ನು ಅಂತರ್-ವಿಶ್ವಾಸವಾಗಿ, ಒಂದು ಸಭೆಯ ಸಂಸ್ಥೆಯಾಗಿ 2005ರಲ್ಲಿ ಸ್ಥಾಪಿಸಲಾಗಿದೆ. ಒಂದು ಪ್ರತ್ಯೇಕವಾದ ಅಂಶಗಳೊಂದಿಗೆ ಪ್ರಪಂಚ ವ್ಯಾಪಕವಾಗಿ ಮಕ್ಕಳ ಸೇವೆಯನ್ನು ಮಾಡುವದೇ ನಮ್ಮ ಮುಖ್ಯ ಉದ್ದೇಶವಾಗಿರುತ್ತದೆ.

ನಮ್ಮಲ್ಲಿ ನೀವು ಎರಡು ವ್ಯತ್ಯಾಸಗಳನ್ನು ಕಾಣಬಹುದು. ಮೊದಲನೇಯದಾಗಿ, ನಮ್ಮಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಡೌನ್ಲೋಡ್ ಮಾಡಿಕೊಳ್ಳವುದಕ್ಕೆ ಆನ್ಲೈನ್ನಲ್ಲಿ ಉಚಿತವಾಗಿ ಇಟ್ಟಿರುತ್ತೇವೆ. ಮುದ್ರಿಸಿದವುಗಳನ್ನು ನಾವು ಮಾರುತ್ತೇವೆ, ಆದರೆ ಅವುಗಳನ್ನು ಜೆರಾಕ್ಸ್‌ ಮಾಡಿಕೊಳ್ಳುವದಕ್ಕೆ ಅವಕಾಶ ಕೊಡುತ್ತೇವೆ. ಅದರ ವಿಷಯವಾಗಿ ನಮಗೆ ಯಾವ ನಿರ್ಬಂಧನವಿಲ್ಲ. ಎರಡನೇಯ ವ್ಯತ್ಯಾಸವೇನೆಂದರೆ, ಮತ್ತೇ ಮತ್ತೇ ನಾವು ಮಾಡಿರುವ ಪುಸ್ತಕಗಳನ್ನು ಪುನಃರ್ ಉಪಯೋಗ ಮಾಡುವದಿಲ್ಲ, ಆದರೆ ಪ್ರತೀ ವರ್ಷ ಹೊಸ ಸಂಡೇ ಸ್ಕೂಲನ್ನು ಮತ್ತು ವಿಬಿಎಸ್ ಪಠ್ಯ ಕ್ರಮಗಳನ್ನು ಹೊಸ ಅಂಶಗಳೊಂದಿಗೆ ತಯಾರಿಸುತ್ತೇವೆ.

ಮೆಕ್ಸಿಕೋ ಪಟ್ಟಣಕ್ಕೆ ಹೊರಗೆ ಒಂದು ಘಂಟೆ ಎನ್ನುವದರ ಮೇಲೆ ನಾವು ಆಧಾರಪಟ್ಟಿರುತ್ತೇವೆ. ಕಳೆದ 10 ವರ್ಷಗಳಲ್ಲಿ, “ಲಾಸ್ ನಿನೋಸ್ ಕ್ಯೂಂಟಾನ್” ಎನ್ನುವ ಸೇವೆಯ ಹೆಸರಿನೊಂದಿಗೆ ಲ್ಯಾಟಿನ್ ಅಮೆರಿಕಾ ಗೋಸ್ಕರ ಸ್ಪಾನಿಷ್ ಭಾಷೆಯಲ್ಲಿ ಈ ಅಂಶಗಳನ್ನು ಸಿದ್ಧಗೊಳಿಸಿದ್ದೇವೆ. 2014 ರಲ್ಲಿ, ಆಂಗ್ಲ ಭಾಷೆಯೊಂದಿಗೆ ಪ್ರಪಂಚ ವ್ಯಾಪಕವಾಗಿ ಇದನ್ನು ವಿಸ್ತರಣೆಗೊಳಿಸಬೇಕೆಂದೆನ್ನುವ ಆಸೆಯಿಂದ ಈ ನಮ್ಮ ದರ್ಶನವನ್ನು ಇನ್ನೂ ಹೆಚ್ಚಾಗಿ ಬೆಳಸಿಕೊಂಡಿದ್ದೇವೆ. 2015 ರಲ್ಲಿ ಮರಾಠಿ, ಮಳಯಾಳಂ, ಕನ್ನಡ, ತೆಲುಗು, ಹಿಂದಿ ಮತ್ತು ಪೋರ್ಚುಗೀಸ್ ಭಾಷೆಗಳಲ್ಲಿ ನಮ್ಮ ಎಲ್ಲಾ ಅಂಶಗಳನ್ನು ಅನುವಾದಿಸಲು ಈಗಾಗಲೇ ನಾವು ಆರಂಭಿಸಿದ್ದೇವೆ. ನಮ್ಮ ಈ ಸಂಸ್ಥೆಯಲ್ಲಿ ಸುಮಾರು 20 ಜನ ಕೆಲಸ ಮಾಡುತ್ತಿದ್ದಾರೆ. ನಮ್ಮ ಹತ್ತಿರವಿರುವ ವಸ್ತುಗಳನ್ನು ಮಾರುವ ಕೆಲಸದಲ್ಲಿ ಇರುವದಕ್ಕೂ ಅಥವಾ ಅವುಗಳನ್ನು ಮುದ್ರಿಸುವದಕ್ಕೂ, ಅನುವಾದಿಸುವದಕ್ಕೂ ಮತ್ತು ಹೊಸ ಅಂಶಗಳನ್ನು ಬರೆಯುವದಕ್ಕೂ ಕಾರ್ಯಾಲಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರಿಸ್ತನಲ್ಲಿ ನಾವೆಲ್ಲರೂ ಸಹೋದರಿ ಮತ್ತು ಸಹೋದರರ ಒಂದು ಗುಂಪಾಗಿದ್ದೇವೆ. ನಿಮಗೆ ಸಹಾಯ ಮಾಡುವದಕ್ಕಾಗಿಯೇ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ.

ನೀವು ಅನೇಕವಾದ ಜೀವನಗಳನ್ನು ಮಾರ್ಪಡಿಸಲು ಇಲ್ಲಿದ್ದೀರಿ; ನಿಮಗೆ ಸಹಾಯ ಮಾಡಲು ನಾವು ಇಲ್ಲಿದ್ದೇವೆ.

ಸಂಪರ್ಕಿಸಬೇಕಾದ ಮಾಹಿತಿ

Otumba, Mexico State (Near Mexico City)
Country code: (52)

592-924-9041
info@childrenareimportant.com

ಮಕ್ಕಳೇ ಪ್ರಮುಖರು ಭಾರತನಮ್ಮ ಸೇವೆ

ಪ್ರಪಂಚದಲ್ಲಿರುವ ಅನೇಕವಾದ ಸಭೆಗಳು ಬೇಕಾಗುವ ಸಂಪನ್ಮೂಲಗಳಿಲ್ಲದೇ ಬರುವಂಥ ತಲೆಮಾರುಗಳನ್ನು ಕ್ರಿಸ್ತನಿಗಾಗಿ ಸಂಪಾದಿಸಬೇಕೆಂದು ಕೆಲಸ ಮಾಡುತ್ತಿದ್ದಾರೆ. ವೆಬ್ಸೈಟಿನಲ್ಲಿಟ್ಟಿರುವ ನಮ್ಮ ಎಲ್ಲಾ ಸಂಪನ್ಮೂಲಗಳು ಡೌನ್ಲೋಡ್ ಮಾಡಿಕೊಳ್ಳುವದಕ್ಕೂ, ಜೆರಾಕ್ಸ್‌ ಮಾಡಿಕೊಳ್ಳುವದಕ್ಕೂ ಮತ್ತು ಎಲ್ಲರಿಗೆ ಹಂಚಿ ಉಪಯೋಗಿಸಿಕೊಳ್ಳುವದಕ್ಕೂ ಉಚಿತವಾಗಿ ಕೊಡಲಾಗುವದು. ಹೌದು, ನೀವು ನೋಡಿರುವದು ಸರಿಯೇ, ಅವುಗಳೆಲ್ಲವೂ ಸಂಪುರ್ಣವಾಗಿ ಉಚಿತ!

ಪ್ರತೀ ವರ್ಷ ಹೊಸ ಅಂಶಗಳನ್ನು ಬರೆದು ಅವುಗಳನ್ನು ಹೊರ ತೆಗೆದುಕೊಂಡು ಬರುವದರಲ್ಲಿ ನಾವು ಮುಂದೆವರಿಯುತ್ತಿದ್ದೇವೆ. ಆ ಮಾರ್ಗದಲ್ಲಿ, ನಾಳಿನ ಚಿಂತೆಯನ್ನು ಬಿಟ್ಟು ನಮ್ಮಲ್ಲಿ ಲಭ್ಯವಿರುವ ಪ್ರತಿಯೊಂದನ್ನು ನೀವು ಉಪಯೋಗಿಸಿಕೊಳ್ಳಬಹುದು. ಬರುವಂಥ ಹೊಸ ವರ್ಷದಲ್ಲಿ ಹೊಸ ಅಂಶಗಳೊಂದಿಗೆ ಎಲ್ಲಾ ಸಂಪನ್ಮೂಲಗಳು ನಿಮಗೆ ಸಿಕ್ಕುತ್ತವೆ! ಮುದ್ರಿಸಿಕೊಳ್ಳುವದಕ್ಕೆ ಸುಲಭವಾಗಿರುವಂಥ ವಿನೋದಾತ್ಮಕವಾದ ಡಿಜೈನ್ಗಳನ್ನು ನಾವು ತಯಾರಿಸುತ್ತೇವೆ. ಪ್ರತೀ ವಾರದ ಪಾಠವನ್ನು ನೀವು ಡೌನ್ಲೋಡ್ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ, ಯಾಕಂದರೆ ಪ್ರತೀ ಸಂಡೇ ಸ್ಕೂಲ್ ಪಠ್ಯಾನುಕ್ರಮವು 13 ವಾರಗಳಿಗೆ ಬೇಕಾಗುವ ಮಾಹಿತಿ ಅದರಲ್ಲಿ ಒಳಗೊಂಡಿರುತ್ತದೆ. ನಿಮಗೆ ಅವಶ್ಯಕತೆಯುಳ್ಳ ವಯಸ್ಸಿನ ಗುಂಪಿಗಾಗಿ ವಿದ್ಯಾರ್ಥಿ ಪುಸ್ತಕಗಳನ್ನು ಮತ್ತು ಉಪಾಧ್ಯಾಯರ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಬಹುದು. ಮತ್ತು ಮುಂಚಿತವಾಗಿಯೇ ಮುಂದೆ ಬರುವಂಥ ಮೂರು ತಿಂಗಳ ತರಗತಿಗಳಿಗೆ ಬೇಕಾಗುವ ಅಂಶಗಳೊಂದಿಗೆ ಸಿದ್ಧತೆಯಿಂದ ನೀವಿರಬಹುದು.

ಪ್ರತೀ ದಿನ ನಮ್ಮ ವೆಬ್ಸೈಟನ್ನು ಸಂದರ್ಶಿಸುವವರ ಸಂಖ್ಯೆ ಸುಮಾರು 1000 ಜನರು. 28 ವಿವಿಧ ದೇಶಗಳಲ್ಲಿರುವ ಜನರು ಪ್ರತಿ ದಿನ ಸುಮಾರು 10 ಜಿಗಾಬೈಟ್ ಮಾಹಿತಿಯನ್ನು ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ. ಅಂದರೆ ಸುಮಾರು 700 ಪುಸ್ತಕಗಳನ್ನು ಪ್ರತೀ ದಿನ ಡೌನ್ಲೋಡ್ ಮಾಡಿಕೊಳ್ಳುತ್ತಿದ್ದಾರೆ! ಈ ಸಂಖ್ಯೆಗಳೊಂದಿಗೆ ಕಳೆದ ವರ್ಷದಲ್ಲಿ ನಾವು ಲೆಕ್ಕವನ್ನು ಮಾಡಿದ್ದೇವೆ, ಸುಮಾರು 1.5 ಮಿಲಿಯನ್ ಮಕ್ಕಳು ನಮ್ಮ ವಿಬಿಎಸ್ ಮತ್ತು ಸಂಡೇ ಸ್ಕೂಲ್ ಮಾಹಿತಿಯಿಂದ ದೇವರ ಕುರಿತಾಗಿ ಕೇಳಿದ್ದಾರೆ. ಇದಕ್ಕಾಗಿ ದೇವರಿಗೆ ಸ್ತೋತ್ರ!!

ಯಾಕಂದರೆ ನಮಗಿರುವ ಅವಶ್ಯಕತೆ ತುಂಬಾ ದೊಡ್ಡದು ಮತ್ತು ಮುದ್ರಣ ಮಾಡುವದಕ್ಕೆ ತುಂಬಾ ವೆಚ್ಚವಾಗುತ್ತದೆ, ಮೆಕ್ಸಿಕೊನಲ್ಲಿ ನಮಗೆ ಕೂಡ ಒಂದು ಮುದ್ರಣಾಲಯವುಂಟು. ಸ್ಪಾನಿಷ್ನಲ್ಲಿರುವ ಪುಸ್ತಕಗಳನ್ನು ನಾವು ಹಣಕ್ಕೆ ಮಾರುತ್ತೇವೆ. ನಾವಿಲ್ಲಿ ಹಣ ಮಾಡಿಕೊಳ್ಳುವದಕ್ಕೋಸ್ಕರ ಇಲ್ಲ, ಆದರೆ ಬರುವಂಥ ತಲೆಮಾರುಗಳನ್ನು ಯೇಸುವಿನಗಾಗಿ ಗಳಿಸಬೇಕೆನ್ನುವ ಆಸೆಯಿಂದ ಇದ್ದೇವೆ. 2014ರಲ್ಲಿ 13 ವಿವಿಧ ಡಿನಾಮಿನೇಷನ್ಗಳಿಂದ ಸುಮಾರು 2500 ಸಭೆಗಳಿಗೆ ಮುದ್ರಿಸಿದ ಪುಸ್ತಕಗಳನ್ನು ನೌಕಾಯಾನದ ಮುಖಾಂತರ ಕಳುಹಿಸಿಕೊಟ್ಟಿದ್ದೇವೆ. ಇದೇ ರೀತಿಯಲ್ಲಿ, ಅತೀ ಶೀಘ್ರದಲ್ಲಿಯೇ ಭಾರತ ದೇಶಕ್ಕೆ ತೆಗೆದುಕೊಂಡು ಬರಬೇಕೆಂದು ನಿರೀಕ್ಷಿಸುತ್ತಿದ್ದೇವೆ.

ನಮ್ಮ ದರ್ಶನದಲ್ಲಿ ಎರಡನೇಯ ವಿಭಾಗವೇನೆಂದರೆ ತರಬೇತಿ, ದರ್ಶನ ಮತ್ತು ಉಪಾಧ್ಯಾಯರಿಗಾಗಿ ಪ್ರಯೋಗಾತ್ಮಕವಾದ ಸಲಹೆಗಳು ಕೊಡುವದಾಗಿದೆ. ಈ ಸೇವೆಗಾಗಿ ಪ್ರತಿಷ್ಠೆ ಮಾಡಿಕೊಂಡಿರುವ ಉಪಾಧ್ಯಾಯರಿಗೆ ನಮ್ಮಲ್ಲಿರುವ ಎಲ್ಲಾ ಸಂಪನ್ಮೂಲಗಳನ್ನು ಕೊಡುವದು, ಪ್ರೇರೇಪಿಸುವದು, ಅವರನ್ನು ಪ್ರೋತ್ಸಹಿಸುವದೇ ಮತ್ತು ಅವರ ಸುತ್ತಮುತ್ತಲಿರುವ ಮಕ್ಕಳಿಗೆ ನಿಜವಾದ ಸೇವೆಯನ್ನು ಮಾಡಲು ಅವರಿಗೆ ಅನುಮತಿಯನ್ನು ಕೊಡುವದೇ ನಮ್ಮ ಕರ್ತವ್ಯ. ಅನೇಕ ವರ್ಷಗಳ ಕಾಲ ಎಡೆಬಿಡದೆ ನಿಮಗೆ ಸಹಾಯ ಮಾಡಬೇಕೆಂದು ನಾವು ಇಷ್ಟ ಪಡುತ್ತಿದ್ದೇವೆ. ಸಂಡೇ ಸ್ಕೂಲಿನಲ್ಲಿ ಬೋಧಿಸುವದು ಅಥವಾ ಅಲ್ಪಾಹಾರ ಕಾರ್ಯಕ್ರಮವನ್ನು ನಿರ್ವಹಿಸುವದು ಅಥವಾ ನಿಮ್ಮ ಮಕ್ಕಳ ಸೇವೆಗಾಗಿ ಅವಶ್ಯಕವಾಗುವ ವಸ್ತುಗಳನ್ನು ಕೊಂಡುಕೊಳ್ಳುವದು ತುಂಬಾ ಕಷ್ಟತರವಾದ ಕೆಲಸಗಳೆಂದು ನಮಗೆ ಗೊತ್ತು. ಈ ಸೇವೆಯನ್ನು ಬಿಟ್ಟು ಬಿಡುವದು ತುಂಬಾ ಸುಲಭ, ಆದರೆ ಮಕ್ಕಳ ಜೀವನಗಳಲ್ಲಿ ಮಾರ್ಪಾಟು ಕಾಣುವದರಲ್ಲಿ ಮತ್ತು ಅವರಿಗಾಗಿ ಕೆಲಸ ಮಾಡುವದರಲ್ಲಿ ಆನಂದ ಸಂತೋಷಗಳುಂಟು. ಇದನ್ನು ನಾವು ಸದಸ್ಸುಗಳೊಂದಿಗೆ, ತರಬೇತಿಯ ವೀಡಿಯೋಗಳೊಂದಿಗೆ ಮತ್ತು ಪ್ರೋತ್ಸಾಹವನ್ನುಂಟು ಮಾಡುವ ಲೇಖನಗಳೊಂದಿಗೆ ಮಾಡುತ್ತೇವೆ. ಈಗ ನಮ್ಮಲ್ಲಿರುವ ಎಲ್ಲಾ ತರಬೇತಿಯ ಸಂಪನ್ಮೂಲಗಳು ಸ್ಪಾನಿಷ್ ಭಾಷೆಯಲ್ಲಿವೆ. ಆದರೆ ಅತೀ ಶೀಘ್ರದಲ್ಲಿಯೇ ಭಾರತ ದೇಶಕ್ಕೂ ಇವುಗಳನ್ನು ತೆಗೆದುಕೊಂಡು ಬರಬೇಕೆಂದು ನಾವು ಆರಂಭಿಸಿದ್ದೇವೆ.

Childrenareimportant.com ಗೆ ಸುಸ್ವಾಗತ!

ಇಲ್ಲಿ ಅನೇಕವಾದ ಸಂಪನ್ಮೂಲಗಳನ್ನು ಮತ್ತು ಪ್ರೋತ್ಸಹವನ್ನು ಕಂಡುಕೊಳ್ಳುವಿರೆಂದು ನಾವು ನಿರೀಕ್ಷಿಸುತ್ತಿದ್ದೇವೆ.