ಕಾಡಿನಲ್ಲಿ ಬದುಕುವುದು - ವಿಬಿಎಸ್

ನಿಮ್ಮ ದುರ್ಬಿನಿಗಳನ್ನು (ದೂರದರ್ಶಕ ಗಾಜುಗಳನ್ನು ಅಥವಾ ಬೈನಾಕುಲರ್ಸ್) ಮತ್ತು ನಿಮ್ಮ ಪ್ರಯಾಣದ ಚೀಲವನ್ನು ತೆಗೆದುಕೊಂಡು ಜೀಪ್.ನಲ್ಲಿ ಏರಿರಿ. ಯಾಕಂದರೆ ಈಗ ಕಾಡು ವಿಬಿಎಸ್.ಗೆ ಹೋಗುವ ಸಮಯವಾಗಿದೆ! ನಮ್ಮ ಸುತ್ತಮುತ್ತಲಿರುವ ಈ ಪ್ರಪಂಚವು ಒಂದು ಕಾಡಿನಂತೆ ಇದೆ, ಈ ಸ್ಥಳದಲ್ಲಿ ಬೇರೊಬ್ಬರು ಇನ್ನೊಬ್ಬರನ್ನು ಮೋಸ ಮಾಡುತ್ತಿದ್ದರೂ, ಕದಿಯುತ್ತಿದ್ದರೂ, ನಮ್ಮಿಂದ ಎಲ್ಲಾ ಪ್ರಯೋಜನಗಳನ್ನು ಹೊಂದಿಕೊಳ್ಳುತ್ತಿದ್ದರೂ ನಾವು ಇಂಥವರ ಮಧ್ಯೆ ಹೇಗೆ ಬದುಕುವುದು ಎಂದು ಕಲಿತುಕೊಳ್ಳುತ್ತೇವೆ. ಆದರೆ, ಯೇಸು ಕ್ರಿಸ್ತನಲ್ಲಿ ನಾವು ಏನಾಗಿದ್ದೇವೋ ಎನ್ನುವುದನ್ನು ನಾವು ಕಲಿಯುತ್ತಿರುವಾಗ ನಾವು ತುಂಬಾ ನಿಶ್ಚಯತೆಯಿಂದ ಇರಬೇಕು.
“ಆದಕಾರಣ ಇಷ್ಟುಮಂದಿ ಸಾಕ್ಷಿಯವರು ಮೇಘದೋಪಾದಿಯಲ್ಲಿ ನಮ್ಮ ಸುತ್ತಲು ಇರುವದರಿಂದ ನಮಗೆ ಅಭ್ಯಂತರ ಮಾಡುವ ಎಲ್ಲಾ ಭಾರವನ್ನೂ ಹತ್ತಿಕೊಳ್ಳುವ ಪಾಪವನ್ನೂ ನಾವು ಸಹ ತೆಗೆದಿಟ್ಟು ನಂಬಿಕೆಯನ್ನು ಹುಟ್ಟಿಸುವವನೂ ಪೂರೈಸುವವನೂ ಆಗಿರುವ ಯೇಸುವಿನ ಮೇಲೆ ದೃಷ್ಟಿಯಿಟ್ಟು ನಮಗೆ ನೇಮಕವಾದ ಓಟವನ್ನು ಸ್ಥಿರ ಚಿತ್ತದಿಂದ ಓಡೋಣ.” - ಇಬ್ರಿ.12:1.
ನಮ್ಮ ಅಂಶದ ವಚನವು ತೋರಿಸಿದಂತೆ, ನಮಗೆ ಮುಂಚಿತವಾಗಿ ಬದುಕಿ ಬಾಳಿದವರಿಂದ ನಾವು ಪ್ರೇರಣೆಗೊಳ್ಳುತ್ತಿದ್ದೇವೆ. ಆದುದರಿಂದ ನಾವು ತುಂಬಾ ನಿಶ್ಚಯತೆಯಿಂದ ಎಲ್ಲಾ ಭಯಗಳನ್ನು, ಪಾಪಗಳನ್ನು ಮತ್ತು ಧಾಳಿಗಳನ್ನು ಜಯಿಸಬಹುದು. ಈ ವಿಬಿಎಸ್.ನಲ್ಲಿ ನಾವೆಲ್ಲರು ಕಾಡಿನೊಳಗೆ ಸಾಹಾಸದಿಂದ ತುಂಬಾ ಆಳಕ್ಕೆ ಹೋಗುತ್ತೇವೆ, ಮತ್ತು ನಾವು ದೇವರ ಕುಟುಂಬದಲ್ಲಿ ಭಾಗವಾಗಿದ್ದೇವೆಂದು ತಿಳಿದುಕೊಂಡು ತುಂಬಾ ಧೈರ್ಯದಿಂದ, ದಯೆಯಿಂದ, ತೃಪ್ತಿಯಿಂದ ಮತ್ತು ಬಲದಿಂದ ಹೊರ ಬರುತ್ತೇವೆ!

ತರಭೇತಿ

(ಇಂಗ್ಲಿಷ್)