ನಂಬಿಕೆಯ ವೀರರು, ಹಂತ ೧

ನಂಬಿಕೆಯ ವೀರರು ಸಂಡೇ ಸ್ಕೂಲ್ ಗೆ ಸ್ವಾಗತ! ಈ ಅಧ್ಯಯನಗಳ ಸರಣಿಯಲ್ಲಿ, ಇಬ್ರಿಯ ೧೧ನೇ ಅಧ್ಯಾಯದಲ್ಲಿ ಬರೆಯಲ್ಪಟ್ಟಿರುವ ನಂಬಿಕೆಯ ವೀರರ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಶಾರೀರಿಕ ಜೀವಿತಕ್ಕಿಂತ ಆತ್ಮೀಕ ಜೀವಿತ ಪ್ರಾಮುಖ್ಯವಾಗಿರುವದರಿಂದ, ನಾವು ನಂಬಿಕೆಯ ಜೀವಿತವನ್ನು ಪಡೆಯುವದು ಹೇಗೆ ಎಂಬದನ್ನು ಕಲಿತುಕೊಳ್ಳೋಣ. ಜೀವನದಲ್ಲಿ ತೆಗೆದುಕೊಳ್ಳುವ ಸಾಧಾರಣ ತೀರ್ಮಾನಗಳಿಗಿಂತ ಆತ್ಮೀಕ ತೀರ್ಮಾನಗಳು ಯಾಕೆ ಪ್ರಾಮುಖ್ಯವಾಗಿವೆ ಎಂಬದನ್ನು ನಾವು ವಿಶ್ಲೇಷಿಸಿಕೊಳ್ಳೋಣ. ದೇವರನ್ನು ನಂಬಿದ, ದೇವರೊಂದಿಗೆ ಮಾತನಾಡಿದ ಮತ್ತು ದೇವರೊಂದಿಗೆ ಜೀವಿಸಿದ ಸ್ತ್ರೀ ಪುರುಷರ ಜೀವಿತಗಳನ್ನು ಪರೀಕ್ಷಿಸುವ ಸಮಯದಲ್ಲಿ ಈ ಪ್ರಶ್ನೆಗಳಿಗೆ ಪ್ರತಿಕ್ರಿಯಿಸೋಣ. ಅವರೆಲ್ಲರೂ ನಮಗೆ ಮಾದರಿಗಳಾಗಿದ್ದಾರೆ. ಕೆಲವೊಮ್ಮೆ ನಾವು ಈ ಜನರು ಮಾಡಿರುವ ಒಳ್ಳೆಯ ಕಾರ್ಯಗಳನ್ನು ನೋಡುತ್ತೇವೆ ಮತ್ತು ಇನ್ನೂ ಕೆಲವೊಮ್ಮೆ ಅವರ ತಪ್ಪುಗಳಿಂದ ಕಲಿತುಕೊಳ್ಳುತ್ತೇವೆ.