ಮೇಲ್ನೋಟ

ಆತ್ಮ ಫಲಗಳ ಕುರಿತಾಗಿ ನಾವು ಕಲಿಯುತ್ತೇವೆ. ಹೇಗಿದ್ದರೂ, ಕೇವಲ ಫಲವನ್ನು ನೋಡುವುದು ಮಾತ್ರವೇ ಅಲ್ಲ, ಆದರೆ ಆತ್ಮ ಫಲಗಳ ವಿರುದ್ಧವಾಗಿ ಹೋರಾಡುತ್ತಿರುವ ನಮ್ಮ ಶರೀರದ ಅನೇಕ ಪಾಪಗಳನ್ನು ನೋಡುತ್ತೇವೆ. ನಿಮ್ಮ ವಿದ್ಯಾರ್ಥಿಗಳು ಚಾಂಪಿಯನ್ಸ್‌ ಆಗುವುದಕ್ಕೆ ಸಹಾಯ ಮಾಡುವುದು ನಿಮ್ಮ ಗುರಿಯಾಗಿರ ಬೇಕು. ಇದನ್ನು ಮಾಡಲು, ಬಾಯ್ಪಾಠ ವಚನಗಳನ್ನು ಕಂಠಾಪಾಠ ಮಾಡುವುದು ಮತ್ತು ಬೈಬಿಲ್ಲಿನ ಕಥೆಗಳನ್ನು ಕೇಳುವುದು ಅಲ್ಲದೆ, ಅವರ ದಿನ ನಿತ್ಯ ಜೀವನದಲ್ಲಿ ಆತ್ಮ ಫಲಗಳನ್ನು ಕಾರ್ಯ ರೂಪದಲ್ಲಿ ಮಾಡಬೇಕು.

"ಆದರೆ ಆತ್ಮನ ಫಲವೇನಂದರೆ--ಪ್ರೀತಿ ಸಂತೋಷ ಸಮಾಧಾನ ದೀರ್ಘಶಾಂತಿ ವಿನಯ ಸದ್ಗುಣ ನಂಬಿಕೆ ಸಾತ್ವಿಕತ್ವ ಮಿತವ್ಯಯ ಇಂಥ ವುಗಳೇ; ಇಂಥವುಗಳಿಗೆ ವಿರೋಧವಾಗಿ ನ್ಯಾಯ ಪ್ರಮಾಣವಿಲ್ಲ." ಗಲಾತ್ಯ.5:22-23

ವಿಭಾಗ 1

ಪಾಠ 1

ಪ್ರೀತಿ -vs- ಸ್ವಾಥರ್ಯ್
ಬೈಬಲ್ ಕಥೆಯಾದ: ಯೇಸು ಶಿಲುಬೆಯ ಮೇಲೆ ಮರಣ ಹೊಂದಿದರು
ಮತ್ತಾಯ. 27:27-56

ಸ್ಮ್ರಿತಿ ಪದ್ಯ

" ಆತನು ನಮಗೋಸ್ಕರ ತನ್ನ ಪ್ರಾಣವನ್ನು ಕೊಟ್ಟದ್ದರಲ್ಲಿಯೇ ದೇವರ ಪ್ರೀತಿ ಇಂಥದ್ದೆಂದು ನಮಗೆ ತಿಳಿದು ಬಂದಿದೆ. ನಾವು ಸಹ ಸಹೋದರರಿಗೋಸ್ಕರ ನಮ್ಮ ಪ್ರಾಣಗಳನ್ನು ಕೊಡುವ ಹಂಗಿನಲ್ಲಿದ್ದೇವೆ. " 1 ಜಾನ್ 3:16

ರಿಂಗುನೊಳಗೆ

ನಿಮ್ಮ ಸ್ನೇಹಿತರ ಸಲಹೆಯ ಮೇರೆಗೆ ಆಟವನ್ನು ಆಡಿಸಿರಿ, ಅವರು ಎಷ್ಟೊತ್ತು ಆಟವನ್ನು ಆಡುತ್ತೇವೆಂದು ಕೇಳಿದಾಗ ಅಷ್ಟೊತ್ತು ಆಟವನ್ನು ಆಡಿರಿ (ನೀವು ಅನುಮತಿ ನೀಡಿದರೆ ಮಾತ್ರ). ಆಡುವದಕ್ಕೆ ನಿಮ್ಮ ಇಷ್ಟವನ್ನು ಅವರ ಮುಂದೆ ಹೇಳಬೇಡಿರಿ. ಈ ಸಮಯದಲ್ಲಿ ನಿಮ್ಮ ಅನಿಸಿಕೆಗಳಿಗೆ ಪ್ರಾಧಾನ್ಯತೆ ಕೊಡಬೇಡಿರಿ. ಏಕಂದರೆ ನಿಮ್ಮ ಬಗ್ಗೆ ಯಾವ ಆಲೋಚನೆ ಮಾಡದೇ, ಅವರಿಗೆ ನಿಮ್ಮ ನಿಜವಾದ ಪ್ರೀತಿಯನ್ನು ತೋರುಸುತ್ತಿದ್ದೀರಿ.

ಪಾಠ 2

ಪ್ರೀತಿ -vs- ತೀರ್ಪು
ಬೈಬಲ್ ಕಥೆಯಾದ: ರವೆ ಮತ್ತು ತೊಲೆ
ಮತ್ತಾಯ. 7:1-5

ಸ್ಮ್ರಿತಿ ಪದ್ಯ

“ಆದದರಿಂದ ಜನರು ನಿಮಗೆ ಏನೇನು ಮಾಡಬೇಕೆಂದು ನೀವು ಇಚ್ಛೈಸುವಿರೋ ಅವುಗಳನ್ನು ನೀವು ಸಹ ಅವರಿಗೆ ಹಾಗೆಯೇ ಮಾಡಿರಿ; ಯಾಕಂದರೆ ಇದೇ ನ್ಯಾಯಪ್ರಮಾಣದ ಮತ್ತು ಪ್ರವಾದಿಗಳ ತಾತ್ಪರ್ಯ. "
ಮತ್ತಾಯ. 7:1-2

ರಿಂಗುನೊಳಗೆ

ಯಾರಿಗಾದರೂ “ಒಳ್ಳೇ ಕೆಲಸವನ್ನು” ಹೇಳಿರಿ ಮತ್ತು ಅವರಲ್ಲಿ ಯಾರಾದರೂ ಒಳ್ಳೇ ಕೆಲಸವನ್ನು ಮಾಡಿರುವದನ್ನು ನೀವು ನೋಡಿದರೇ ಅವರನ್ನು ಅಭಿನಂದಿಸಿರಿ. ನಿಮ್ಮ ಹತ್ತಿರ ಯಾವಾಗಲೂ ಇರುವಂತೆ ಒಂದು ಚಿಕ್ಕ ಕನ್ನಡಿಕವನ್ನು ತೆಗೆದಿಟ್ಟುಕೊಳ್ಳಿರಿ. ನೀವು ಯಾರಿಗಾದರೂ ತೀರ್ಪು ಮಾಡಲು ಶೋಧನೆಗೆ ಗುರಿ ಮಾಡಿದಾಗ ನಿಮ್ಮ ಹತ್ತಿರವಿರುವ ಚಿಕ್ಕ ಕನ್ನಡಿಕವನ್ನು ತೆಗೆದು ಅದರಲ್ಲಿ ನಿಮ್ಮ ಮುಖವನ್ನು ನೋಡಿಕೊಳ್ಳಿರಿ. ಇವತ್ತು ಯಾರ ತಪ್ಪುಗಳನ್ನು ಎತ್ತಿ ತೋರಿಸುವ ಅವಶ್ಯಕತೆಯಿಲ್ಲವೆಂದು ನಿಮಗೆ ನೀವೆ ನೆನಪು ಮಾಡಿಕೊಳ್ಳಿರಿ.

ಪಾಠ 3

ಪ್ರೀತಿ -vs- ದ್ವೇಷ
ಬೈಬಲ್ ಕಥೆಯಾದ: ಯೂದಾ ಯೇಸುವಿಗೆ ದ್ರೋಹ ಮಾಡಿದನು.
ಮತ್ತಾಯ. 26:14-16

ಸ್ಮ್ರಿತಿ ಪದ್ಯ

"ಒಬ್ಬನು--ನಾನು ದೇವರನ್ನು ಪ್ರೀತಿಸುತ್ತೇನೆ ಎಂದು ಹೇಳಿ ತನ್ನ ಸಹೋದರನನ್ನು ಹಗೆ ಮಾಡಿದರೆ ಅವನು ಸುಳ್ಳುಗಾರನಾಗಿದ್ದಾನೆ. ಯಾಕಂದರೆ ತಾನು ಕಾಣುವ ಸಹೋದರನನ್ನು ಪ್ರೀತಿಸದವನು ಕಾಣದಿರುವ ದೇವರನ್ನು ಅವನು ಹೇಗೆ ಪ್ರೀತಿಸಾನು?ದೇವರನ್ನು ಪ್ರೀತಿಸುವವನು ತನ್ನ ಸಹೋದರನನ್ನೂ ಪ್ರೀತಿಸಬೇಕೆಂಬ ಈ ಆಜ್ಞೆ ಯನ್ನು ನಾವು ಆತನಿಂದ ಹೊಂದಿದ್ದೇವೆ. "
1 ಜಾನ್ 4:20

ರಿಂಗುನೊಳಗೆ

ನೀವು ಇಷ್ಟಪಡದಂಥ ವಕ್ತಿಯನ್ನು ಆರಿಸಿಕೊಂಡು ಅವರಿಗೆ ಏನಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡಿರಿ. ಯಾರಾದರೂ ಮೋಸ ಮಾಡುವಾಗ ಅಥವಾ ಕೆಟ್ಟು ಹೋಗುತ್ತಿರುವಾಗ ನಿಮ್ಮ ನಾಲಿಗೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿರಿ. ಅವರ ಮೇಲೆ ಯಾವ ಮಾತನ್ನು ಆಡಬೇಡಿರಿ ಅಥವಾ ಅವರಿಗೆ ಯಾವ ತೊಂದರೆ ಕೊಡಬೇಡಿರಿ.

ಪಾಠ 4

ಪ್ರೀತಿ -vs- ಸ್ವಯಂತೀರ್ಪು
ಬೈಬಲ್ ಕಥೆಯಾದ: ಕರುಣೆಯುಳ್ಳ ಸಮಾರ್ಯದವನ ಕುರಿತ ದೃಷ್ಟಾಂತ
ಲೂಕ. 10:25-37

ಸ್ಮ್ರಿತಿ ಪದ್ಯ

“ಅದಕ್ಕೆ ಅವನು ಪ್ರತ್ಯುತ್ತರವಾಗಿ--ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯ ದಿಂದಲೂ ನಿನ್ನ ಪೂರ್ಣಪ್ರಾಣದಿಂದಲೂ ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣಮನಸ್ಸಿನಿಂ ದಲೂ ಪ್ರೀತಿಸಬೇಕು; ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಅಂದನು. ”
ಲೂಕ. 10:27

ರಿಂಗುನೊಳಗೆ

ಈ ವಾರದಲ್ಲಿ ಅಗತ್ಯತೆಯಲ್ಲಿ ಇರುವ ಒಬ್ಬರಿಗೆ ಸಹಾಯ ಮಾಡುವದನ್ನು ನಿಲ್ಲಿಸಿರಿ. ಈ ರೀತಿ ಮಾಡಿದಾಗ, ಅನೇಕರಿಂದ ಬರುವಂಥಹ ಮಾತುಗಳಿಗೆ ಲಕ್ಷ್ಯೆವಿಡಬೇಡಿರಿ. ನಿಮ್ಮ ಸ್ಥಾಯಿನಲ್ಲಿರದಂಥಹ ಯಾರಿಗಾದರೊಬ್ಬರಿಗೆ ಒಂದು ಪ್ರತ್ಯೇಕವಾದದ್ದನ್ನು ಮಾಡಿರಿ.

ಪಾಠ 5

ಪ್ರೀತಿ -vs- ಅತ್ಮೀಕವಾದ ಪ್ರಾಮುಖ್ಯತೆ
ಬೈಬಲ್ ಕಥೆಯಾದ: ದಾವೀದನನ್ನು ಅರಸನಾಗಿ ಆರಿಸಿಕೊಂಡದ್ದು.
1 ಸಮು. 16:1-13

ಸ್ಮ್ರಿತಿ ಪದ್ಯ

"ಪ್ರೀತಿ ಬಹು ತಾಳ್ಮೆಯುಳ್ಳದ್ದು, ಕರುಣೆಯುಳ್ಳದ್ದು; ಪ್ರೀತಿಯು ಹೊಟ್ಟೇಕಿಚ್ಚು ಪಡುವದಿಲ್ಲ, ಹೊಗಳಿ ಕೊಳ್ಳುವದಿಲ್ಲ, ಉಬ್ಬಿಕೊಳ್ಳುವದಿಲ್ಲ, ಮರ್ಯಾದೆ ಗೆಟ್ಟು ನಡೆಯುವದಿಲ್ಲ, ಸ್ವಾರ್ಥತೆಯನ್ನು ಬಯಸು ವದಿಲ್ಲ, ಬೇಗನೆ ಕೋಪಗೊಳ್ಳುವದಿಲ್ಲ, ಕೆಟ್ಟದ್ದನ್ನು ಯೋಚಿಸುವದಿಲ್ಲ. ಅನ್ಯಾಯದಲ್ಲಿ ಸಂತೋಷಪಡದೆ ಸತ್ಯದಲ್ಲಿಯೇ ಸಂತೋಷಪಡುತ್ತದೆ. ಎಲ್ಲವನ್ನೂ ಸಹಿಸಿಕೊಳ್ಳುತ್ತದೆ, ಎಲ್ಲವನ್ನೂ ನಂಬುತ್ತದೆ, ಎಲ್ಲವನ್ನೂ ನಿರೀಕ್ಷಿಸುತ್ತದೆ, ಎಲ್ಲವನ್ನೂ ತಾಳಿಕೊಳ್ಳುತ್ತದೆ. "
1 ಕೊರಿಂಥದವರಿಗೆ 13:4-7

ರಿಂಗುನೊಳಗೆ

ನೀವು ಪ್ರೀತಿಯನ್ನು ನಿಲ್ಲಿಸಬೇಕೆಂದಿರುವ ಆತ್ಮೀಯಕವಾದ ಚಟುವಟಿಕೆ ಏನಾದರೂ ಇದ್ದರೆ, ಅದರ ಕುರಿತಾಗಿ ದೇವರಲ್ಲಿ ಕೇಳಿಕೊಳ್ಳಿರಿ. ಪ್ರೀತಿಯನ್ನ ತೋರಿಸುವದಕ್ಕೆ ಈ ವಾರದಲ್ಲಿ ಇನ್ನೂ ಅನೇಕವಾದ ಕ್ರಿಯೆಗಳನ್ನು ಮಾಡಿರಿ : ಹೊಗಳಿಕೊಳ್ಳಬೇಡಿರಿ, ನಿಮಗೆ ನೀವು ಏನೂ ಮಾಡಿಕೊಳ್ಳದೇ ಇತರರಿಗೆ ಯಾವುದು ಒಳ್ಳೆಯದೋ ಅದನ್ನು ಮಾಡಿರಿ ಮತ್ತು ಜನರು ಮಾಡಿರುವಂಥ ತಪ್ಪುಗಳನ್ನು ನೀವು ಎತ್ತಿ ತೋರಿಸಲು ಹಿಡಿದುಕೊಳ್ಳಬೇಡಿರಿ.

ಪಾಠ 6

ಸಂತೋಷ -vs- ಅಸೂಯೆ
ಬೈಬಲ್ ಕಥೆಯಾದ: ಮತಾಧಿಕಾರಿಗಳು ಅಸೂಯೆಪಟ್ಟರು
ಅ.ಕೃ. 5:12-33

ಸ್ಮ್ರಿತಿ ಪದ್ಯ

"ನೀವು ಇನ್ನೂ ಪ್ರಾಪಂಚಿಕರಾಗಿದ್ದೀರಿ. ನಿಮ್ಮೊಳಗೆ ಹೊಟ್ಟೇಕಿಚ್ಚು, ಜಗಳ, ಭೇದಗಳು ಇರುವಲ್ಲಿ ನೀವು ಪ್ರಾಪಂಚಿಕರಾಗಿದ್ದು ಮನುಷ್ಯರಂತೆ ನಡೆಯುತ್ತೀರಲ್ಲವೇ?"
1 ಕೊರಿಂಥದವರಿಗೆ 3:3

ರಿಂಗುನೊಳಗೆ

ಆತ್ಮೀಯ ವರಗಳಿಗಾಗಿ, ಭೌತಿಕ ಶರೀರಕ್ಕಾಗಿ, ಆಸ್ತಿ ಪಾಸ್ತಿಗಳಿಗಾಗಿ ಮತ್ತು ನಿಮಗಿರುವ ಕುಟುಂಬಕ್ಕಾಗಿ ದೇವರಿಗೆ ವಂದನೆಗಳನ್ನು ತಿಳಿಸಿರಿ. ನೀವು ಹೊಂದಿರುವವುಗಳಲ್ಲಿಯೇ ಸಂತೃಪ್ತಿಯು ಸಿಗಲು ಮತ್ತು ಸಂತೋಷವನ್ನು ಪಡೆಯಲು ದೇವರಲ್ಲಿ ಬೇಡಿಕೊಳ್ಳಿರಿ. ಕಳೆದ ಹೋದ ಕಾಲದಲ್ಲಿ ಯಾರ ಮೇಲೆಯಾದರೂ ನಿಮಗೆ ಅಸೂಯೆ ಇಟ್ಟುಕೊಂಡಿದ್ದರೆ ಅವರನ್ನು ಆರಿಸಿಕೊಂಡು, ಅವರಿಗೆ ಒಂದು ಒಳ್ಳೆಯ ಉಡುಗೊರೆಯನ್ನು ಕೊಡಿರಿ. (ಅವರ ಮೇಲೆ ನಿಮಗೆ ಅಸೂಯೆ ಇತ್ತೆಂದು ಹೇಳಬೇಡಿರಿ.)

ಪಾಠ 7

ಸಂತೋಷ -vs- ದುರಾಸೆ
ಬೈಬಲ್ ಕಥೆಯಾದ: ಐಶ್ವರ್ಯವಂತನಾದ ಯೌವನಸ್ಥನು
ಮತ್ತಾಯ. 19:16-30

ಸ್ಮ್ರಿತಿ ಪದ್ಯ

“ಇದಲ್ಲದೆ ಆತನು ಅವರಿಗೆ--ಜಾಗ್ರತೆ ಯಾಗಿದ್ದು ಲೋಭಕ್ಕೆ ಎಚ್ಚರಿಕೆಯಾಗಿರ್ರಿ; ಯಾಕಂದರೆ ಒಬ್ಬ ಮನುಷ್ಯನಿಗೆ ಸಮೃದ್ಧಿಯಾದ ಆಸ್ತಿಯು ಅವನಿಗೆ ಜೀವಾಧಾರವಲ್ಲ ಅಂದನು. ”
ಲೂಕ. 12:15

ರಿಂಗುನೊಳಗೆ

ಸಭೆಯಲ್ಲಿಟ್ಟಿರುವ ಕಾಣಿಕೆಯ ಪೆಟ್ಟಿಗೆಯಲ್ಲಿ ನಿಮ್ಮದೇಯಾಗಿರುವ ಹಣವನ್ನು ದೇವರ ಸೇವೆಗಾಗಿ ಹಾಕಿರಿ. ಅದು ಯಾರಿಗೆ ಹೋಗುತ್ತಿದೆಯೆಂದು ತಿಳಿದುಕೊಳ್ಳಲು ಪ್ರಯತ್ನಿಸಬೇಡಿರಿ. ನಿಮ್ಮ ಹಣವನ್ನು ಉಪಯೋಗಿಸಿ ಯಾರಿಗಾದರೂ ಸೇವೆಮಾಡಿರಿ. ನಿಮ್ಮ ಹತ್ತಿರ ಯಾವುದೇ ಹಣವು ಇಲ್ಲದಿದ್ದಲ್ಲಿ, ನಿಮ್ಮ ಹತ್ತಿರವಿರುವ ಯಾವುದೇ ವಸ್ತುವನ್ನು ತೆಗೆದುಕೊಂಡು ಬೇರೆಯವರಿಗೆ ಕೊಟ್ಟು ದೇವರನ್ನು ಮಹಿಮೆಪಡಿಸಿರಿ.

ಪಾಠ 8

ಸಂತೋಷ -vs- ಸ್ವಯಂ ಕರುಣೆ
ಬೈಬಲ್ ಕಥೆಯಾದ: ಯೋನನು ಮತ್ತು ಹುಳ
ಯೋನ. 4:1-10

ಸ್ಮ್ರಿತಿ ಪದ್ಯ

"ಹೇಗಂದರೆ ಕ್ಷಣಮಾತ್ರ ವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕ ವಾದ ಮತ್ತು ನಿರಂತರವಾಗಿರುವ ಗೌರವವುಳ್ಳ ಮಹಿಮೆಯನ್ನುಂಟು ಮಾಡುತ್ತದೆ.ನಾವು ಕಾಣು ವಂಥವುಗಳನ್ನು ದೃಷ್ಟಿಸದೆ ಕಾಣದಿರುವಂಥವುಗಳನ್ನು ದೃಷ್ಟಿಸುವವರಾಗಿದ್ದೇವೆ; ಯಾಕಂದರೆ ಕಾಣುವಂಥ ವುಗಳು ಸ್ವಲ್ಪಕಾಲ ಮಾತ್ರ ಇರುವವು; ಕಾಣದಿರುವಂಥ ವುಗಳು ಸದಾಕಾಲವೂ ಇರುವವು. ನಾವು ಕಾಣು ವಂಥವುಗಳನ್ನು ದೃಷ್ಟಿಸದೆ ಕಾಣದಿರುವಂಥವುಗಳನ್ನು ದೃಷ್ಟಿಸುವವರಾಗಿದ್ದೇವೆ; ಯಾಕಂದರೆ ಕಾಣುವಂಥ ವುಗಳು ಸ್ವಲ್ಪಕಾಲ ಮಾತ್ರ ಇರುವವು; ಕಾಣದಿರುವಂಥ ವುಗಳು ಸದಾಕಾಲವೂ ಇರುವವು."
2 ಕೊರಿಂಥದವರಿಗೆ 4:17-18

ರಿಂಗುನೊಳಗೆ

ಸಮಯವಿದ್ದಾಗ ಮನೆಯಿಲ್ಲದವರಿಗೆ ಸಹಾಯ ಮಾಡಿರಿ ಅಥವಾ ಬಡವರನ್ನು ಪೋಷಿಸುವ ಸೇವೆಯಲ್ಲಿ ನಿರತವಾಗಿರಿ. ಆಸ್ಪತ್ರಿಗಳಲ್ಲಿ ರೋಗಿಗಳ್ನನು ಸಂದರ್ಶಿಸಿರಿ. ನಿಮ್ಮ ದರ್ಶನವನ್ನು ದೊಡ್ಡದಾಗಿಸಲು ದೇವರು ನಿಮ್ಮ ಕಣ್ಣುಗಳನ್ನು ತೆರೆಯುವದಕ್ಕೆ ದೇವರಿಗೆ ಬೇಡಿಕೊಳ್ಳಿರಿ ಮತ್ತು ನಿಮ್ಮ ಕಣ್ಣುಗಳನ್ನು ನೀವೇ ಮುಚ್ಚಿಕೊಳ್ಳಲು ಸಹಾಯಕ್ಕಾಗಿ ದೇವರನ್ನು ಬೇಡಿಕೊಳ್ಳಿರಿ.

ಪಾಠ 9

ಸಂತೋಷ -vs- ಕೃಜ್ಞತೆಯಿಲ್ಲದವರು
ಬೈಬಲ್ ಕಥೆಯಾದ: ಯೇಸು ಹತ್ತು ಮಂದಿ ಕುಷ್ಠರೋಗಿಗಳನ್ನು ಗುಣಪಡಿಸಿದರು.
ಲೂಕ. 17:11-19

ಸ್ಮ್ರಿತಿ ಪದ್ಯ

"ಕೃತಜ್ಞತೆಯಿಂದ ಆತನ ಬಾಗಿಲುಗಳಿಗೂ ಸ್ತೋತ್ರದಿಂದ ಆತನ ಅಂಗಳಗಳಿಗೂ ಬನ್ನಿರಿ; ಆತನನ್ನು ಕೊಂಡಾಡಿರಿ, ಆತನ ಹೆಸರನ್ನು ಸ್ತುತಿಸಿರಿ.ಕರ್ತನು ಒಳ್ಳೆಯವನು; ಆತನ ಕರುಣೆಯು ಯುಗಯುಗಕ್ಕೂ ಆತನ ಸತ್ಯತೆಯು ತಲತಲಾಂತರಕ್ಕೂ ಇರುವವು. "
ಕೀರ್ತನ 100:4

ರಿಂಗುನೊಳಗೆ

ಪ್ರತೀ ದಿನ ಏನಾದರೊಂದು ನಿಮಗೆ ಕೊಟ್ಟು ಸಂತೋಷಪಡಿಸುವ ನಿಮ್ಮ ತಂದೆತಾಯಿಗಳಿಗಾಗಿ (ಅಥವಾ ಆ ಸ್ಥಾನದಲ್ಲಿ ಬೇರೆಯವರಿದ್ದರೆ) ವಂದನೆಗಳನ್ನು ಹೇಳಿರಿ. ಯಾವಾಗಲೂ ಇದನ್ನು ನಿಮ್ಮ ಹತ್ತಿರ ಇರುವದಿಲ್ಲವೆಂದು ನೆನಪು ಮಾಡಿಕೊಳ್ಳುತ್ತಾ, ಯಾವುದು ವ್ಯರ್ಥವಾಗಿ ಹೋಗದಂಥೆ ಆರಿಸಿಕೊಳ್ಳಿರಿ.

ಪಾಠ 10

ಸಮಾಧಾನ -vs- ಚಿಂತೆ
ಬೈಬಲ್ ಕಥೆಯಾದ: ಎಲೀಯನಿಗೆ ಕಾಗೆಗಳಿಂದ ಆಹಾರವನ್ನು ಒದಗಿಸಿದ ಕುರಿತಾಗಿ
1 ಅರಸು 17:1-6

ಸ್ಮ್ರಿತಿ ಪದ್ಯ

"ಆದರೆ ಮೊದಲು ನೀವು ದೇವರ ರಾಜ್ಯವನ್ನೂ ಆತನ ನೀತಿಯನ್ನೂ ಹುಡುಕಿರಿ. ಇವುಗಳ ಕೂಡ ಅವೆಲ್ಲವುಗಳು ಕೂಡಿಸಲ್ಪಡುವವು.ಆದಕಾರಣ ನಾಳೆಗೋಸ್ಕರ ಚಿಂತೆ ಮಾಡಬೇಡಿರಿ; ಯಾಕಂದರೆ ನಾಳಿನ ದಿನವು ತನಗೆ ಸಂಬಂಧ ಪಟ್ಟವುಗಳಿಗಾಗಿ ತಾನೇ ಚಿಂತಿಸುವದು. ಆ ದಿನಕ್ಕೆ ಅದರ ಕಾಟ ಸಾಕು. "
ಮತ್ತಾಯ. 6:33

ರಿಂಗುನೊಳಗೆ

ನಿಮ್ಮೊಂದಿಗೆ ಇರುವದನ್ನು ಇತರರೊಂದಿಗೆ ಹಂಚಿಕೊಳ್ಳಿರಿ, ಇದರ ಅರ್ಥವೇನೆಂದರೆ ಅದಿಲ್ಲದೇ ನೀವು ಹೊರಗಡೆ ಹೋಗಬಾರದು. ಆಹಾರವಾಗಲಿ, ಬಟ್ಟೆಗಳಾಗಲಿ, ಬಸ್ ಟಕೇಟ್ ಧರವಾಗಲಿ ಅಥವಾ ನಿಮ್ಮ ಹಣವು ಖರ್ಚಾಗುವಂಥೆ ಯಾವುದಿದ್ದರೂ ಪರವಾಗಿಲ್ಲ. ನಿಮ್ಮ ಅಗತ್ಯತೆಗಳು ದೇವರೇ ಪುರೈಸುವದಕ್ಕೆ ದೇವರಲ್ಲಿ ಬೇಡಿಕೊಳ್ಳಿರಿ.

ಪಾಠ 11

ಸಮಾಧಾನ -vs- ಭಯ
ಬೈಬಲ್ ಕಥೆಯಾದ: ಪೇತ್ರನು ನೀರಿನ ಮೇಲೆ ನಡೆದದ್ದು
ಮತ್ತಾಯ. 14:22-33

ಸ್ಮ್ರಿತಿ ಪದ್ಯ

"ಯೇಸು ಅವರಿಗೆ--ನಿಮ್ಮ ಅಪನಂಬಿಕೆಯ ದೆಸೆಯಿಂದಲೇ; ನಾನು ನಿಮಗೆ ನಿಜವಾಗಿ ಹೇಳುವದೇನಂದರೆ--ಸಾಸಿವೆ ಕಾಳಷ್ಟು ನಂಬಿಕೆ ನಿಮಗಿರುವದಾದರೆ ನೀವು ಈ ಬೆಟ್ಟಕ್ಕೆ--ಇಲ್ಲಿಂದ ಆ ಸ್ಥಳಕ್ಕೆ ಹೋಗು ಎಂದು ಹೇಳಿದರೆ ಅದು ಹೋಗುವದು; ಮತ್ತು ಯಾವದೂ ನಿಮಗೆ ಅಸಾಧ್ಯವಾಗಿರುವದಿಲ್ಲ. ಪ್ರಾರ್ಥನೆ ಉಪವಾಸಗಳಿಂದಲ್ಲದೆ ಈ ತರವಾದದ್ದು ಹೊರಟು ಹೋಗುವದಿಲ್ಲ ಅಂದನು.”
ಮತ್ತಾಯ. 17:20-21

ರಿಂಗುನೊಳಗೆ

ನಿಮಗೆ ಅಸಾಧ್ಯವಾದದ್ದೆಂದು ಅಂದುಕೊಂಡಿರುವದನ್ನು ಆರಿಸಿಕೊಳ್ಳಿರಿ ಮತ್ತು ಅದರ ವಿಷಯವಾಗಿ ನಿಮ್ಮ ಆಲೋಚನೆಯನ್ನು ಬಿಟ್ಟು ಬಿಡಿರಿ. ಇದನ್ನು ಮಾಡುವದಕ್ಕೆ ಯೇಸುವಿನ ಸಹಾಯಕ್ಕಾಗಿ ಬೇಡಿಕೊಳ್ಳಿರಿ. ಆದನಂತರ ಒಂದಾದ ನಂತರ ಒಂದನ್ನು ಮಾಡುವದಕ್ಕೆ ಪ್ರಯತ್ನಪಟ್ಟಿರಿ. (ಆರಂಭಿಸುವದಕ್ಕೆ ಇದು ತುಂಬಾ ಸುಲಭವಾಗಿರುತ್ತದೆ, ಪೇತ್ರನು ನೀರಿನ ಮೇಲೆ ನಡೆಯಲು ಆರಂಭಿಸದಂಥೆ, ಆದರೆ ಇಲ್ಲಿ ನಿಮಗಿರಬೇಕಾದ ಗುರಿಯೇನೆಂದರೆ ನಿಮಗೆ ಅಸಾಧ್ಯವಾದದ್ದು ಯಾವುದಾದರೊಂದನ್ನು ಮುಂದಿಟ್ಟುಕೊಂಡು, ಅದರ ವಿಷಯವಾಗಿ ಪ್ರಯತ್ನಪಡಬೇಕು.)

ಪಾಠ 12

ಸಮಾಧಾನ -vs- ಅಪಶ್ರುತಿ
ಬೈಬಲ್ ಕಥೆಯಾದ: ಮತ್ತೊಂದು ಕೆನ್ನೆಯನ್ನು ಒಡ್ಡು
ಮತ್ತಾಯ. 5:38-42

ಸ್ಮ್ರಿತಿ ಪದ್ಯ

"ಸಾಧ್ಯ ವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನವಾಗಿರ್ರಿ."
ರೋಮನ್ನರು 12:18

ರಿಂಗುನೊಳಗೆ

ಈ ವಾರದಲ್ಲಿ ನಿಮ್ಮನ್ನು ನೀವು ಯಾವುದಾದರೊಂದು ತಪ್ಪು ಮಾಡುವದಕ್ಕೆ ಆಯ್ಕೆ ಮಾಡಿಕೊಳ್ಳಿರಿ. (ಬೇಕೆಂದು ಮಾಡದೇ ತನ್ನಷ್ಟಕ್ಕೆ ಅದೇ ನಡೆಯುವದಾಗಿರಬೇಕು.) ನಿಮಗೆ ಮನೆ ಕೆಲಸಕ್ಕಾಗಿ ಕೊಟ್ಟಿರುವದನ್ನು ಮಾಡದೇ ಇರ್ರಿ.

ಪಾಠ 13

ಸಮಾಧಾನ -vs- ಸ್ವನಂಬಿಕೆ
ಬೈಬಲ್ ಕಥೆಯಾದ: ಯೇಸು 5000 ಜನರಿಗೆ ಊಟ ಮಾಡಿಸಿದ್ದು
ಲೂಕ. 9:10-17

ಸ್ಮ್ರಿತಿ ಪದ್ಯ

"ಅದಕ್ಕಾತನು--ನನ್ನ ಕೃಪೆಯೇ ನಿನಗೆ ಸಾಕು; ಬಲಹೀನತೆಯಲ್ಲಿಯೇ ನನ್ನ ಬಲವು ಪರಿಪೂರ್ಣವಾಗುತ್ತದೆ ಎಂದು ನನಗೆ ಹೇಳಿದನು. ಹೀಗಿರಲಾಗಿ ಕ್ರಿಸ್ತನ ಬಲವು ನನ್ನಲ್ಲಿ ನೆಲೆಸಿ ಕೊಂಡಿರಬೇಕೆಂದು ನನಗುಂಟಾಗುವ ನಿರ್ಬಲಾ ವಸ್ಥೆಗಳ ವಿಷಯದಲ್ಲಿಯೇ ಬಹು ಸಂತೋಷವಾಗಿ ಹೆಚ್ಚಳಪಡುವೆನು. "
2 ಕೊರಿಂಥದವರಿಗೆ 12:9

ರಿಂಗುನೊಳಗೆ

ನೀವು ಎಲ್ಲಿ ಬಲಹೀನವಾಗಿದ್ದೀರೋ ಆ ವಿಷಯದಲ್ಲಿ ದೇವರಿಗೆ ಸೇವೆಯನ್ನು ಮಾಡುವ ಒಳ್ಳೆಯ ಅವಕಾಶಕ್ಕಾಗಿ ದೇವರಲ್ಲಿ ಬೇಡಿಕೊಳ್ಳಿರಿ. ಆ ವಿಷಯದಲ್ಲಿ ಸೇವೆ ಮಾಡಲು ನಿಮ್ಮ ಸಭೆಯಲ್ಲಿ ಸಮರ್ಪಣೆ ಮಾಡಿಕೊಳ್ಳಿರಿ. ನೀವು ಮೌನವಾಗಿದ್ದರೆ, ಈ ವಾರದಲ್ಲಿ ಹೆಚ್ಚಾಗಿ ಮಾತನಾಡಿರಿ. ನೀವು ಹೆಚ್ಚಾಗಿ ಮಾತನಾಡುತ್ತಿದ್ದರೇ, ಈ ವಾರವೆಲ್ಲಾ ನೀವು ಮೌನವಾಗಿರ್ರಿ.

 

ವಿಭಾಗ 2

ಪಾಠ 1

ತಾಳ್ಮೆ ವಿರುದ್ಧ ಅಮರ್ಷ
ಬೈಬಲ್ ಕಥೆ: ಚಿನ್ನದ ಕರು
ಗುಳೆ 32

ಸ್ಮ್ರಿತಿ ಪದ್ಯ

" ಆತನ ಮಹಿಮಾ ಶಕ್ತಿಯ ಪ್ರಕಾರ ಪರಿಪೂರ್ಣ ಬಲಹೊಂದಿ ಬಲಿಷರಾಗಿ ಆನಂದ ಪೂರ್ವಕವಾದ ತಾಳ್ಮೆಯನ್ನು ಮತ್ತು ದೀರ್ಘಶಾಂತಿಯನ್ನು ತೋರಿಸುವವರೂ " ಕೋಲೋಷಿಯನ್ಸ್ 1:11

ರಿಂಗುನೊಳಗೆ

ದೇವರು ನಿಮಗೆ ಮಾಡಿದು ಏನಾದರೂ ಒಂದನ್ನು ಮಣ್ಣಿನ ಮೇಲೆ ಬರಿಯಿರಿ, ಆ ಸ್ಥಳವನ್ನು  ಕಲ್ಲಿನಿಂದ ಅಂಕಿಸಿ. ಹೀಗೆ ಒಂದು ಚರ್ಚ್ ನಲ್ಲಿ ಮಾಡಿ, ಒಬ್ಬ ವಿದ್ಯಾರ್ಥಿಯ ತನ್ನದೇ ಆದ ಒಂದು ವಿಶೇಷ  ಸ್ಥಳವಿರಬೇಕು. ಹಾಗೆ ಒಂದನ್ನು ಮನೆಯಲ್ಲಿ ಮಾಡಬೇಕು. ತಮ್ಮ ಸ್ಥಳವನ್ನು ಅಂಕಿಸಿದ ಮೇಲೆ, ದೇವರು ನಿಮ್ಮನ್ನು ಮಾಡಿದ್ದನ್ನು ಬೇರೆಯವರ ಜೊತೆ ಅದನ್ನು ಹಂಚಿಕೊಳ್ಳಬೇಕು

ಪಾಠ 2

ತಾಳ್ಮೆ ವಿರುದ್ಧ ದುಃಖ
ಬೈಬಲ್ ಕಥೆ: ಬೈಬಲ್ ಕಥೆ: ಜಾಬ್ ತಾಳ್ಮೆಯಿಂದ ಅನುಭವಿಸುತ್ತಾನೆ.
ಜಾಬ್ 1-2

ಸ್ಮ್ರಿತಿ ಪದ್ಯ

" ನನ್ನ ಸಂಕಷ್ಟದಲ್ಲಿ ಇದೇ ನನ್ನ ಆದರಣೆಯು; ಯಾಕಂದರೆ ನಿನ್ನ ವಾಕ್ಯವು ನನ್ನನ್ನು ಬದುಕಿಸಿತು. " ಸ್ತೋತ್ರಪಾಠ 119:50

ರಿಂಗುನೊಳಗೆ

ನೀವು ಹಿಂದೆ ಕಷ್ಟ ಅನುಭವಿಸಿದಾಗ ದೇವರನ್ನು ಧನ್ಯವಾದವನ್ನು ಬರೆಯಿರಿ. ಜಾಬ್ ಹೇಳಿದ ಹಾಗೆ ಹೇಳಲು ಪ್ರಯತ್ನಿಸಿ “ದೇವರು ಕೊಟ್ಟಿದನು ಮತ್ತೆ ದೇವರು ತೆಗೆದುಕೊಂಡನು. ದೇವನ ಹೆಸರು ಸ್ತುತಿಸಲಿ”. ನಿಮ್ಮ ಪ್ರಮಾಣವನ್ನು ಕ್ಲಾಸ್ನನ್ ಎಲ್ಲರಿಂದ ಹಂಚಿಕೊಳ್ಳಿ

ಪಾಠ 3

ತಾಳ್ಮೆ ವಿರುದ್ಧ ಹೆಮ್ಮೆ
ಬೈಬಲ್ ಕಥೆ: ರಾಜ ನೆಬುಚಾದ್ನ್ಝ್ಆರ್
ಡೇನಿಯಲ್ 4

ಸ್ಮ್ರಿತಿ ಪದ್ಯ

" ಒಂದು ಸಂಗತಿಯ ಪ್ರಾರಂಭ ಕ್ಕಿಂತ ಅದರ ಅಂತ್ಯವೇ ಲೇಸು; ಆತ್ಮದಲ್ಲಿ ಗರ್ವಿಷ್ಠ ನಿಗಿಂತ ತಾಳ್ಮೆಯುಳ್ಳವನೇ ಉತ್ತಮ. " ಏಕ್ಚ್ಲೇಷ್ಯಾಸ್ಟ್ಸ್7:8

ರಿಂಗುನೊಳಗೆ

ತಮ್ಮನ್ನು ವಿನಮ್ರ ಮಾಡಲು ಏನಾದರು ಚಟುವಟಿಕೆಗಳನ್ನು ಮಡಿಯಿರಿ. ನೀವು ಸಾಲಿನಲ್ಲಿ ಬೇರೆಯವರನ್ನು ತಮ್ಮ ಸ್ಥಳವನ್ನು ಕೊಡಬಹುದು, ಬಹಳ ಹೆಮ್ಮೆಯ ಪಾತ್ರಗಳಿದ್ದಾಗ ಟಿವಿ ನೋಡದಿರಿ, ವೇದಿಕೆಯಲ್ಲಿ ಅಥವಾ ಬೇರೆಯವರ ಯಡೂರಲ್ಲಿ ತಮ್ಮ ಸ್ಥಳವನ್ನು ಬಿಟ್ಟುಕೊಡಿ, ಅಥವಾ ಬೇರೆಯವರನ್ನು ಸರಿಯಾಗಲು ಬಿಡಿ.

ಪಾಠ 4

ತಾಳ್ಮೆ ವಿರುದ್ಧ ಕೋಪ
ಬೈಬಲ್ ಕಥೆ: ಡೇವಿಡ್ , ನಬಲ್ ಮತ್ತು ಅಭಿಘಾಯ್ಲ್
1 ಸ್ಯಾಮ್ಯುಯೆಲ್ 25

ಸ್ಮ್ರಿತಿ ಪದ್ಯ

" ಕೋಪಮಾಡಬೇಕಾದರೂ ಪಾಪ ಮಾಡಬೇಡಿರಿ; ಸೂರ್ಯನು ಮುಳುಗುವದಕ್ಕಿಂತ ಮುಂಚೆ ನಿಮ್ಮ ಸಿಟ್ಟು ತೀರಲಿ; " ಎಫೆಸಿಯನ್ 4:26

ರಿಂಗುನೊಳಗೆ

ಕೆಲವು ಚಿಕ್ಕ ವಸ್ತುಗಳನ್ನು ಕಾಣಿಕೆಯಾಗಿ ಕೊಡಲು ಖರೀದಿಸಿ. ನೀವು ಕೋಪವಾದಾಗ ಒಂದು ವಸ್ತುವನ್ನು ನೀವು ಕೋಪವಾದ ವ್ಯಕ್ತಿಯನ್ನು ಕಾಣಿಕೆಯಾಗಿ ಕೊಡಿ. ನಿಮ್ಮ ಕೋಪವನ್ನು ಕಾಣಿಕೆ ಕೊಡುವ ಮೂಲಕ ತೆಗೆದು ಹಾಕಿರಿ, ನಿಮ್ಮ ತಾಳ್ಮೆ ಬೆಳೆಯುವದನ್ನು ಅನುಭವಿಸಿಯಿರಿ

ಪಾಠ 5

ತಾಳ್ಮೆ ವಿರುದ್ಧ ಅಧಿಕಾರ
ಬೈಬಲ್ ಕಥೆ: ಮನ್ನಾ ಮತ್ತು ಕ್ವಾಯ್ಲ್
ಎಕ್ಸೋಡಸ್ 16:1-18

ಸ್ಮ್ರಿತಿ ಪದ್ಯ

"ನೀವೂ ದೀರ್ಘಶಾಂತಿಯಿಂದಿರ್ರಿ; ನಿಮ್ಮ ಹೃದಯಗಳನ್ನು ದೃಢಪಡಿಸಿಕೊಳ್ಳಿರಿ, ಯಾಕಂದರೆ ಕರ್ತನ ಪ್ರತ್ಯ ಕ್ಷತೆಯು ಹತ್ತಿರವಾಯಿತು. ಸಹೋದರರೇ, ನೀವು ಒಬ್ಬರನ್ನೊಬ್ಬರು ದ್ವೇಷಿಸಬೇಡಿರಿ; ನ್ಯಾಯವಿಚಾರಣೆಗೆ ಗುರಿಯಾದೀರಿ. ಅಗೋ, ನ್ಯಾಯಾಧಿಪತಿಯು ಬಾಗಲಿನ ಮುಂದೆಯೇ ನಿಂತಿದ್ದಾನೆ." ಜೇಮ್ಸ್ 5:8-9

ರಿಂಗುನೊಳಗೆ

ಈ ವಾರ ಯಾರು ನಿಮ್ಮ ಸಾಲಹೊರುರಲ್ಲ . ನೀವು ಯಾರನ್ನು ಏನಾದರು ಬೇಡುವಾಗ ತಮ್ಮನು ನಿಲ್ಲಿಸಿರಿ. ಪ್ರತಿ ಸಲ ನೀವು ಬೇರೆಯರಿಂದ ಊಟ, ಉಪಕಾರ, ಸಮಯ, ಸಹಾಯ ಬೇಡುವುದನ್ನು ನಿಲ್ಲಿಸಿದಾಗ; ನೀವು ಈ ಪಾಪದಿಂದ ಗೆಲ್ಲುವಿರಿ 

ಪಾಠ 6

ಕರುಣೆ ವಿರುದ್ಧ ಹೋಲಿಕೆ
ಬೈಬಲ್ ಕಥೆ: ರಾಜ ಸೌಲ್ ಮತ್ತು ಡೇವಿಡ್
1 ಸ್ಯಾಮ್ಯುಯೆಲ್ 18:5-16

ಸ್ಮ್ರಿತಿ ಪದ್ಯ

" ಪ್ರತಿಯೊಬ್ಬನು ತನ್ನ ಸ್ವಂತ ಕೆಲಸವನ್ನು ಪರಿಶೋಧಿ ಸಲಿ; ಆಗ ಅವನು ತನ್ನಲ್ಲಿಯೇ ಸಂತೋಷಪಡುವದಕ್ಕೆ ಆಸ್ಪದವಾಗುವದೇ ಹೊರತು ಮತ್ತೊಬ್ಬನಲ್ಲಿ ಅಲ್ಲ; " ಗಲಾಟಿಯನ್ಸ್ 6:4

ರಿಂಗುನೊಳಗೆ

ವಾರದ ಆರಂಭದಲ್ಲಿ 20 ಚಂಡನ್ನು ಇಟ್ಟುಕೊಳ್ಳಿ.ಪ್ರತಿ ಬಾರಿ ನೀವು ನಿಮ್ಮನ್ನು ಬರೆಯವಿರಿಂದ ಹೋಲಿಸಿದಾಗ ಒಂದು ಚಂಡನ್ನು ತೆಗೆಯಿರಿ. ಇದರಲ್ಲಿ ಫೇಸ್ಬುಕ್ ಮತ್ತು ಇಂತಹ ಬೇರೆ ಅಪ್ಪ್ಲಿಕೆಶನ್ಸ್  ಸೇರಿಕೊಂಡಿವೆ ಯಲ್ಲಿ ನೀವು ಬೇರೆಯವರಿಂದ ಹೋಲಿಕೆ ಮಾಡುತ್ತೀರಾ. ನಿಮಗೆ ಫಾಸ್ಬುಕ್ನಿಂದ ಒಂದು ವಾರ ತಪ್ಪಿಸ ಬೇಕಾದರೆ .

ಪಾಠ 7

ಕರುಣೆ ವಿರುದ್ಧ ಮೋಸ
ಬೈಬಲ್ ಕಥೆ: ಪೀಟರ್ ಕ್ರೈಸ್ತನ್ನು ನಿರಾಕರಿಸುವುದು
ಮೆಥಿಯುವ್ 26:31-35, 69-75

ಸ್ಮ್ರಿತಿ ಪದ್ಯ

" ನಿಷ್ಪ್ರಯೋಜಕರೊಂದಿಗೆ ನಾನು ಕೂತುಕೊಳ್ಳ ಲಿಲ್ಲ; ವಂಚಕರ ಸಂಗಡ ನಾನು ಹೋಗುವದಿಲ್ಲ. " ಸ್ತೋತ್ರಪಾಠ 26:4

ರಿಂಗುನೊಳಗೆ

ಈ ವಾರ ನೀವು ಸುಳ್ಳು ಹೇಳಿರುವ ವ್ಯಕ್ತಿ ಹತ್ತಿರ ಹೋಗಿ ಅವರಿಗೆ ನಿಜವನ್ನು ಹೇಳಿಯಿರಿ. ಅವರಿಂದ ಕ್ಷಮೆ ಕೇಳಿಯಿರಿ.
ಪ್ರತಿ ಬಾರಿ ನೀವು ಹೋಗಿ ನಿಜವನ್ನು ಹೇಳಿದಾಗ ಈ ಪಾಪದಿಂದ ನೀವು ವಿಜಯಿಸುತ್ತೀರಾ

ಪಾಠ 8

ಕರುಣೆ ವಿರುದ್ಧ ನಿರ್ಲಿಪ್ತತೆ
ಬೈಬಲ್ ಕಥೆ: ರುತ್ ಮತ್ತು ನವೋಮಿ
ರುತ್ 1:8-22

ಸ್ಮ್ರಿತಿ ಪದ್ಯ

" ನಿನಗೆ ಸಾಧ್ಯವಿರುವಾಗ ಹೊಂದತಕ್ಕವರಿಗೆ ಒಳ್ಳೆ ಯದು ಮಾಡುವದನ್ನು ತಪ್ಪಿಸಬೇಡ. " ಗಾದೆಗಳು 3:27

ರಿಂಗುನೊಳಗೆ

ಸಹಾಯ ಮಾಡಲು ಯಾರದನ್ನು ಹುಡುಕಿ, ಆದರೆ ಅವರಿಗೆ ಮತ್ತು ನಿಮಗೆ ಏನು ಸಂಬಂಧ ಇರಬಾರದು.
ರಸ್ತೆಯಲ್ಲಿ ದಿಕ್ಕಿಲದವರನ್ನು ನೀಡಿರಿ, ಅಥವಾ ಶಾಲೆಯಲ್ಲಿ ಹೊಸ ಪೆನ್ಸಿಲ್ ಬೇಕಾಗಿರುವ ಹುಡುಗನಿಗೆ. ಗಮನವಿರಲಿ ಆ ವ್ಯಕ್ತಿ ಮತ್ತು ನಿಮಗೆ ಏನು ಸಂಬಂಧವಿರಬಾರದು. ಮತ್ತು ಆ ವ್ಯಕ್ತಿಯ ಜವಾಬ್ದಾರರು ನೀವಿರಬಾರದು

ಪಾಠ 9

ಕರುಣೆ ವಿರುದ್ಧ ದ್ವೇಷ
ಬೈಬಲ್ ಕಥೆ: ಎಸ್ತರ್ ಜನರನ್ನು ರಕ್ಷಿಸುತ್ತಾಳೆ
ಎಸ್ತರ್ 3-5

ಸ್ಮ್ರಿತಿ ಪದ್ಯ

" ನನ್ನ ಸಹೋದರರೇ, ನೀವಂತೂ ಒಳ್ಳೇತನ ದಿಂದಲೂ ಸಕಲ ಜ್ಞಾನದಿಂದಲೂ ತುಂಬಿದವರಾಗಿ ಒಬ್ಬರಿಗೊಬ್ಬರು ಬುದ್ಧಿ ಹೇಳುವದಕ್ಕೆ ಶಕ್ತರಾಗಿದ್ದೀರೆಂದು ನಿಮ್ಮ ವಿಷಯದಲ್ಲಿ ನನಗೂ ನಿಶ್ಚಯವುಂಟು. " ರೋಮನ್ಸ್ 15:14

ರಿಂಗುನೊಳಗೆ

ಈ ವಾರ ಯಾರಿಗಾದರೂ ಬೇರೆಯವರ ಕಾರಣವಿಲ್ಲದ ಸ್ವಾರ್ಥ್ಯದಿಂದ ಕಾಪಾಡಿ. ನಾವು ಬೇರೆಯವರನ್ನು ಕಾಪಾಡುವಾಗ, ನಮ್ಮೊಳಗಿನ ಪಾಪವನ್ನು ಕೂಡ ನಾಶ ಮಾಡುತ್ತೇವೆ. ತಮ್ಮ ಕೀರ್ತಿ ಅಪಾಯಕ್ಕೆ ಈಡಾಗಿ ಬೇರೆಯವರ ಕೀರ್ತಿಯನ್ನು ಕಾಪಾಡಿ.

ಪಾಠ 10

ಒಳ್ಳೆತನ ವಿರುದ್ಧ ಉದಾಸೀನತೆ
ಬೈಬಲ್ ಕಥೆ:ಸೊಡೊಂ ಮತ್ತು ಗೊಮೋರಹ್
ಜೆನಿಸಿಸ್ 18:16-33

ಸ್ಮ್ರಿತಿ ಪದ್ಯ

" ಸಂಕಟಪಡುವವನಿಗೆ ಸ್ನೇಹಿತನಿಂದ ದಯೆ ದೊರೆ ಯತಕ್ಕದ್ದು; ಆದರೆ ಅವನು ಸರ್ವಶಕ್ತನ ಭಯವನ್ನು ಬಿಡುತ್ತಾನೆ. " ಜಾಬ್ 6:14

ರಿಂಗುನೊಳಗೆ

ಪ್ರಾರ್ಥಿಸಿ ಮತ್ತು ನಿಮ್ಮ ಹೃದಯದೊಳಗಿನ  ಉದ್ವೇಗವನ್ನು ಹೆಚ್ಚಿಸಲು ದೇವರಿಂದ ಈ ವಾರ  ಕೇಳಿಕೊಳ್ಳಿ. ನಿಮ್ಮೊಳಗಿನ ಬೇರೆಯವರ ಉದ್ವೇಗವನ್ನು ಹೆಚ್ಚಿಸಲು, ಬೇರೆಯವರಿಗೆ ಮಾಡಲು ಏನಾದರು ಹುಡುಕಿ. ಬೇರೆಯವರನ್ನು ನೀಡುತ್ತಿರುವ ಆಶ್ರಯಕ್ಕೆ ಭೇಟಿ ನೀಡಿ ಅವರಜೊತೆ ಸಹಕರಿಸಿ, ವಿಶ್ವದ ಬೇಡಿಕೆಗಳ ವೀಡಿಯೋಸ್ ನೋಡಿ, ಸಾಧ್ಯವಿದ್ದಲ್ಲಿ ಭಾಗವಹಿಸಿ.

ಪಾಠ 11

ಒಳ್ಳೆಯತನ ವಿರುದ್ಧ ದುಷ್ಟತನ
ಬೈಬಲ್ ಕಥೆ: ಹೆರೋಡ್ ಮತ್ತು ಬ್ಯಾಪ್ಟಿಸ್ಟ್ ಜಾನ್
ಲೂಕ್ 3:18-20, ಮ್ಯಾಥ್ಯೂ 14:1-12

ಸ್ಮ್ರಿತಿ ಪದ್ಯ

" ಕೇಡಿನಿಂದ ತೊಲಗಿ ಒಳ್ಳೆಯದನ್ನು ಮಾಡು; ಸಮಾ ಧಾನವನ್ನು ಹುಡುಕಿ ಅದನ್ನು ಹಿಂಬಾಲಿಸು. " ಸ್ತೋತ್ರಪಾಠ 34:14

ರಿಂಗುನೊಳಗೆ

ನಿಮ್ಮ ಸುತ್ತ ದುಷ್ಟತನವನ್ನು ಹುಡುಕಿ, ಯಲ್ಲಿ ಯಾರೋ ಬೇರೆಯವರಿಗೆ ಕಾರಣವಿಲ್ಲದೆ ತೊಂದರೆ ಕೊಡುತ್ತಿದ್ದಾರೆ.
ಈ ವಾರ ಮಧ್ಯವರ್ತಿಯಾಗಲು ಉಪಾಯ ಮಾಡಿ ನಿರಪರಾಧಿಯರನ್ನು ರಕ್ಷಿಸಿ. ಅವರನ್ನು ಸ್ಕೂಲಿಂದ ಮ್ಯಾನೇಜ್ ಹೋಗಲು ಬೇರೆ ದಾರಿಯಿಂದ ಹೋಗಲು ಸಹಾಯ ಮಾಡಿ, ಅವರನ್ನು ಊಟ ನೀಡಿ,  ಅಥವಾ 4 ಜನರ ಗುಂಪಲ್ಲಿ ಅವರ ಜೊತೆ ನಡೆಯಿರಿ.

ಪಾಠ 12

ಒಳ್ಳೆಯತನ ವಿರುದ್ಧ ಸ್ವಾರ್ಥ ಆಕಾಂಕ್ಷೆ
ಬೈಬಲ್ ಕಥೆ :ಬೇಬಾಲ್ನ ಸ್ತಂಭ
ಜೆನಿಸಿಸ್ 11:1-9

ಸ್ಮ್ರಿತಿ ಪದ್ಯ

" ಕಲಹದಿಂದಾಗಲಿ ಒಣ ಹೆಮ್ಮೆಯಿಂದಾಗಲಿ ಯಾವ ದನ್ನೂ ಮಾಡದೆ ಪ್ರತಿಯೊಬ್ಬನು ದೀನ ಮನಸ್ಸಿನಿಂದ ಬೇರೆಯವರನ್ನು ತನಗಿಂತಲೂ ಶ್ರೇಷ್ಠರೆಂದು ಎಣಿಸಲಿ. " ಫಿಲಿಪಿಯನ್ಸ್ 2:3

ರಿಂಗುನೊಳಗೆ

ನಿಮ್ಮ ಜನಪ್ರಿಯತೆಯನ್ನು ಹೆಚ್ಚಿಸಲು ಈ ವಾರ ಏನು ಮಾಡದಿರಿ. ಅವಕಾಶವಿದ್ದಲ್ಲಿ ತಿರಸ್ಕರಿಸಿ.
ಪ್ರತಿ ಬಾರಿ ಹೀಗೆ ಮಾಡಿದಾಗ ನೀವು ಈ ಪಾಪದಿಂದ ವಿಜಯಿಸುತ್ತೀರಾ

ಪಾಠ 13

ಒಳ್ಳೆಯತನ ವಿರುದ್ಧ ಕೊಳೆತನ
ಬೈಬಲ್ ಕಥೆ: ಜೋಸೆಫ್ ಮತ್ತು ಪೋಟೀಫರ
ಜೆನಿಸಿಸ್ 39:1-21

ಸ್ಮ್ರಿತಿ ಪದ್ಯ

" ಹೀಗಿರುವದರಿಂದ ನಾವು ಯಾವಾ ಗಲೂ ನಿಮಗೋಸ್ಕರ ಪ್ರಾರ್ಥನೆ ಮಾಡಿ ಈ ಕರೆಯು ವಿಕೆಗೆ ದೇವರು ನಿಮ್ಮನ್ನು ಯೊಗ್ಯರೆಂದು ಎಣಿಸು ವಂತೆಯೂ ತನ್ನ ಒಳ್ಳೇತನದ ಒಳ್ಳೇ ಸಂತೋಷವನ್ನು ಮತ್ತು ಬಲದಿಂದಾದ ನಂಬಿಕೆಯ ಕಾರ್ಯವನ್ನು ಪೂರೈಸುವ ಹಾಗೆಯೂ ಬೇಡಿಕೊಳ್ಳುತ್ತೇವೆ.ಹೀಗಾದರೆ ನಮ್ಮ ದೇವರ ಮತ್ತು ಕರ್ತನಾದ ಯೇಸು ಕ್ರಿಸ್ತನ ಕೃಪೆಗನುಸಾರವಾಗಿ ನಮ್ಮ ಕರ್ತನಾದ ಯೇಸು ಕ್ರಿಸ್ತನ ಹೆಸರು ನಿಮ್ಮಲ್ಲಿ ಮಹಿಮೆ ಹೊಂದುವದು, ಆತನಲ್ಲಿ ನೀವೂ ಮಹಿಮೆ ಹೊಂದುವಿರಿ. " 2 ಥೆಸ್ಸಲೋನಿಯನ್ಸ್ 1:11

ರಿಂಗುನೊಳಗೆ

ಈ ವಾರ ನಿಮ್ಮ ಹೃದಯದ ಸಂರಕ್ಷಣೆ ಮಾಡಿ.ನಿಮ್ಮ ವಿರುದ್ಧ ಏನಾದರು ಆದರೆ ನೆನಪಿರಲಿ ಪಾಪಿಗಳು ಅವರು, ನೀವಲ್ಲ. ಅನುದಿನ ಪ್ರಾರ್ಥನೆಯಲ್ಲಿ ಹೇಳಿ "ನಾನು ನಿನ್ನ ಎದುರು ಶುದ್ಧವಾಗಿದ್ದೇನೆ,ದೇವಾ "
ನೀವು ಬೇರೆಯವರ ವಿರುದ್ಧ ಏನಾದರು ಮಾಡಿದರೆ ಅವರಿಂದ ಮತ್ತು ದೇವರಿಂದ ಕ್ಷಮೆ ಕೇಳಿರಿ. ಅವಾಗ ನೀವು ಮತ್ತೆ ಪ್ರಾರ್ಥಿಸಬಹುದು "ನಾನು ನಿನ್ನ ಎದುರು ಶುದ್ಧವಾಗಿದ್ದೇನೆ,ದೇವಾ "

 

ವಿಭಾಗ 3 ಶೀಘ್ರದಲ್ಲಿಯೆ ಬರಲಿದೆ!