ನಮ್ಮನ್ನು ಸಂಪರ್ಕಿಸಿ
ನಿಮ್ಮಿಂದ ನಾವು ಕೇಳುವದಕ್ಕೆ ಇಷ್ಟಪಡುತ್ತಿದ್ದೇವೆ! ನೀವು ಮಕ್ಕಳಿಗೆ ಸೇವೆ ಮಾಡುವದಕ್ಕೆ ಪಠ್ಯ ಕ್ರಮಗಳಿಂದ ಮತ್ತು ಸಲಹೆಗಳೊಂದಿಗೆ ನಿಮ್ಮ ಅಗತ್ಯತೆಗಳನ್ನು ಪುರೈಸಬೇಕೆನ್ನುವದೇ ನಮ್ಮ ಗುರಿಯಾಗಿರುತ್ತದೆ. ನಮ್ಮಲ್ಲಿರುವ ಸಂಪನ್ಮೂಲಗಳನ್ನು ಉಚಿತವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು, ಉಚಿತವಾಗಿ ಉಪಯೋಗಿಸಬಹುದು, ಉಚಿತವಾಗಿ ಮುದ್ರಿಸಿಕೊಳ್ಳಬಹುದು ಮತ್ತು ಯಾವ ನಿರ್ಬಂಧನಗಳಿಲ್ಲದೆ ಎಲ್ಲಾ ಸೇವೆಯ ಸಂಸ್ಥೆಗಳಿಗೆ ಮತ್ತು ಇತರ ಸಭೆಗಳಿಗೆ ಉಚಿತವಾಗಿ ಹಂಚಬಹುದು.
info@childrenareimportant.com
ಡಿಸ್ಟ್ರಿಬ್ಯೂಟರ್ ಆಗುವದು
ಪ್ರಪಂಚಕ್ಕೆಲ್ಲಾ ಈ ಬೆಲೆಯುಳ್ಳ ಸಂಪನ್ಮೂಲಗಳನ್ನು ಕೊಡಬೇಕೆನ್ನುವದೇ ನಮ್ಮ ದರ್ಶನವಾಗಿರುತ್ತದೆ. ನಮ್ಮ ಹತ್ತಿರವಿರುವ ಎಲ್ಲಾ ಸಂಪನ್ಮೂಲಗಳನ್ನು ಯಾವ ಹಣವು ತೆಗೆದುಕೊಳ್ಳದೇ ಕೊಡಬಹುದು, ಆದರೆ ನಾವು ನಮ್ಮ ಸಾಮಥರ್ಯ್‌ಕ್ಕೆ ಅತೀತವಾಗಿ ಬೆಳೆದಾಗ ಅನೇಕವಾದ ಸಂಪನ್ಮೂಲಗಳನ್ನು ನಾವು ಕೆಲವು ವರ್ಷಗಳಾದನಂತರ ಕೊಡಬೇಕೆಂದು ನಿರೀಕ್ಷಿಸುತ್ತಿದ್ದೇವೆ. ಇವಾಗ ನಾವು ಉತ್ಪಾದಿಸುವದಕ್ಕೂ ಮತ್ತು ಸಾರಿಗೆಗೆ ಬರುವಂಥ ಖರ್ಚನ್ನು ತಿರುಗಿ ಪಡೆದುಕೊಳ್ಳುವದಕ್ಕೋಸ್ಕರ ಇವುಗಳನ್ನು ಬೆಲೆಗೆ ಮಾರುತ್ತಿದ್ದೇವೆ. ನಿಮ್ಮ ಪ್ರಾಂತ್ಯದಲ್ಲಿರುವ ಮಕ್ಕಳಿಗೆ ಸೇವೆ ಮಾಡುವದಕ್ಕೆ ಈ ಬೆಲೆಯುಳ್ಳ ಸಂಪನ್ಮೂಲಗಳನ್ನು ಕೊಡುವದಕ್ಕೆ ನಮ್ಮೊಂದಿಗೆ ಸಹಕರಿಸಲು ಮತ್ತು ಡಿಸ್ಟ್ರಿಬ್ಯೂಟರಾಗಿ ಕೆಲಸ ಮಾಡುವದಕ್ಕೆ ಆಸಕ್ತಿ ಇದ್ದರೆ, ಈಗಲೇ ನಿಮಗೆ ಸಹಾಯ ಮಾಡಲು ನಾವು ಸಂಸಿದ್ಧರಾಗಿರುತ್ತೇವೆ.
www.childrenareimportant.com
info@childrenareimportant.com
ಪ್ರಕಾಶಕರು, ಸಂಪಾದಕೀಯ ಮತ್ತು ವ್ಯಾಪಕ ಪ್ರಮಾಣದ ವಿತರಣೆ
ಲೋಕದಾದ್ಯಂತವಿರುವ ಶಿಕ್ಷಕರನ್ನು ಸಜ್ಜುಗೊಳಿಸುವದು ಮತ್ತು ಪ್ರೋತ್ಸಾಹಪಡಿಸುವದು ಹಾಗೂ ಕ್ರಿಸ್ತನಿಗಾಗಿ ಜೀವಿತಗಳನ್ನು ಬದಲಾಯಿಸಲು ಅವರಿಗೆ ಸಹಾಯ ಮಾಡುವದೇ ನಮ್ಮ ಗುರಿಯಾಗಿದೆ. ಇತರೆ ಸೇವೆಗಳೊಂದಿಗೆ ಸೇರಿ ಸೇವೆ ಮಾಡುವಾಗ ಹೆಚ್ಚಿನ ಪ್ರಭಾವ ಬೀರಲು ಸಾಧ್ಯ ಎಂದು ನಂಬುವವರಾಗಿದ್ದೇವೆ. ಈ ಕಾರಣದಿಂದಾಗಿ, ಕೆಳಗೆ ಕೊಡಲಾಗಿರುವ ಕಾರ್ಯಗಳನ್ನು ಕೊಡಲು ಬಯಸುವವರಾಗಿದ್ದೇವೆ:
- ವ್ಯಕ್ತಿಗತವಾಗಿರುವವರು, ತಂಡವಾಗಿರುವವರು ಮತ್ತು ಕಂಪನಿಗಳವರಿಗೆ ನಮ್ಮ ಸಾಮಗ್ರಿಗಳನ್ನು ಮುದ್ರಿಸುವ ಮತ್ತು ಪೂರ್ತಿಯಾಗಿ ಅಥವಾ ಭಾಗವಾಗಿ ಸಣ್ಣ ಪ್ರಮಾಣದಲ್ಲಿ ಅಥವಾ ದೊಡ್ಡ ಪ್ರಮಾಣದಲ್ಲಿ ವಿತರಿಸುವ ಹಾಗೂ ಅದಕ್ಕೆ ಕ್ರಯವನ್ನು ನಿಗದಿಪಡಿಸುವ ಅಥವಾ ಉಚಿತವಾಗಿ ವಿತರಿಸುವ ಅನುಮತಿಯಿರುತ್ತದೆ.
- ನಮ್ಮ ಸಾಮಗ್ರಿಗಳನ್ನು ಮುದ್ರಣ ಅಥವಾ ವಿದ್ಯುನ್ಮಾನ ರೂಪಕದಲ್ಲಿ ನಾವು ನಿಗದಿಪಡಿಸಿರುವ ಕ್ರಯದನುಸಾರವಾಗಿ ಪ್ರಕಾಶಪಡಿಸುವ ಅಥವಾ ನಮ್ಮ ಸಾಮಗ್ರಿಗಳನ್ನು ಇತರೆ ಪ್ರಕಾಶಕರು ಉಚಿತವಾಗಿ ವಿತರಿಸಿದರೂ ಅದನ್ನು ಪ್ರಕಾಶಪಡಿಸುವ ಹಕ್ಕು ನಮ್ಮದಾಗಿರುತ್ತದೆ.
- ನಾವು ಸಾಮಗ್ರಿಗಳ ಪ್ರತ್ಯೇಕ ಹಕ್ಕುಗಳನ್ನು ಕೊಡುವದಿಲ್ಲ. ಇತೆರೆ ಎಲ್ಲಾ ಪ್ರಕಾಶಕರು ಮತ್ತು ಸಂಪಾದಕರಿಗೆ ಇದೇ ವಿಷಯ ಅನ್ವಯವಾಗುತ್ತದೆ.
- ಒಂದುವೇಳೆ ನೀವು ನಮ್ಮ ಸಾಮಗ್ರಿಗಳನ್ನು ಪೂರ್ತಿಯಾಗಿ ಅಥವಾ ಭಾಗವಾಗಿ ಪ್ರಕಾಶಪಡಿಸಿದರೆ ಅಥವಾ ಪುನರ್-ವಿತರಿಸಿದರೆ, ನೀವೇನು ಮಾಡುತ್ತಿದ್ದೀರಿ ಎಂಬದನ್ನು ದಯವಿಟ್ಟು ನಮಗೆ ತಿಳಿಸಿರಿ; ನಮಗೂ ಪ್ರೋತ್ಸಾಹ ದೊರೆಯುತ್ತದೆ.
- ಒಂದುವೇಳೆ ವಿಷಯಗಳಿಗೆ ಅಥವಾ ಸಿದ್ದಾಂತಗಳಿಗೆ ಏನಾದರೂ ಬದಲಾವಣೆ ಮಾಡಿದರೆ ಅಥವಾ ತಿದ್ದುಪಡಿ ಮಾಡಿದರೆ, ದಯವಿಟ್ಟು ನಮ್ಮ ಹೆಸರು, ಲಾಂಛನ ಮತ್ತು ಸಂಪರ್ಕದ ಮಾಹಿತಿಯನ್ನು ತೆಗೆದು ಹಾಕಿರಿ.
- ನಿಮ್ಮ ದರ್ಶನ ಮತ್ತು ನಿಯೋಗದ ಆಧಾರದ ಮೇರೆಗೆ, ಆರ್ಥಿಕವಲ್ಲದ ರೀತಿಯಲ್ಲಿ ನಿಮಗೆ ಸಹಾಯ ಮಾಡಲು ಬಯಸುವವರಾಗಿದ್ದೇವೆ – ಉದಾಹರಣೆಗೆ, ಒಂದು ಅಥವಾ ಎರಡು-ಕಲರ್ ಪ್ರೀಪ್ರೆಸ್ ಫೈಲ್ಸ್. ಕೇಳಿಕೊಳ್ಳಲು ಮುಜುಗರಪಡಬೇಡಿರಿ.
ಹೆಚ್ಚಿನ ಮಾಹಿತಿಗಳಿಗಾಗಿ ನಮ್ಮನ್ನು ಸಂಪರ್ಕಿಸಿರಿ: info@childrenareimportant.com
ಲ್ಯಾಟಿನ್ ಅಮೆರಿಕಾ
ಮೆಕ್ಸಿಕೋ ಪಟ್ಟಣದಲ್ಲಿ ನಾವು ನಿವಾಸವಾಗಿರುತ್ತೇವೆ ಮತ್ತು ಸುಮಾರು 2005ನೇ ವರ್ಷದಿಂದ ಸ್ಪಾನಿಷ್ ಭಾಷೆಯಲ್ಲಿ ಈ ಅಂಶಗಳನ್ನು ಬರೆಯುವದಕ್ಕೆ ಆರಂಭಿಸಿರುತ್ತೇವೆ. ನಮ್ಮ ಪ್ರಧಾನ ಕಛೇರಿಯು ಮೆಕ್ಸಿಕೊ ಪಟ್ಟಣಕ್ಕೆ ಸಮೀಪವಾಗಿರುತ್ತದೆ : 01-800-839-1009 or 52-592-924-9041 pedidos@losninoscuentan.com
ಈ ಸಂಪನ್ಮೂಲಗಳೊಂದಿಗೆ ಕೆಳಕಂಡ ದೇಶಗಳಿಗೆ ನಾವು ಆಶೀರ್ವಾದಕರವಾಗಿರುವದಕ್ಕೆ ದೇವರು ಒಳ್ಳೆಯ ಅವಕಾಶವನ್ನು ಕೊಟ್ಟಿದ್ದಕ್ಕಾಗಿ ದೇವರಿಗೆ ಸ್ತೋತ್ರ : ಮೆಕ್ಸಿಕೊ, ಕೊಲಂಬಿಯಾ, ಅರ್ಜೆಂಟೈನಾ, ಪೆರು, ವೆನೆಜುಲಾ, ಚಿಲೆ, ಗಾಟಮೆಲಾ, ಇಕಾಡೊರ್, ಕ್ಯೂಬಾ, ಬೊಲಿವಿಯಾ, ಡೊಮಿನಿಕಲ್ ರೀಪಬ್ಲಿಕ್, ಹೊಂಡುರಾಸ್, ಪಾರಗೆ, ನಿಕಾರಾಗಾ, ಎಲ್ ಸಾಲ್ವೇಡರ್, ಕೋಸ್ಟಾ ರಿಕಾ, ಪಾನಮ, ಪ್ಯುರ್ಟೋ ರಿಕೋ, ಸ್ಪೆಯಿನ್ ಮತ್ತು ಉರುಗಾಯೆ!
ಅನೇಕ ಸಭೆಗಳು ತಮ್ಮಷ್ಟಕ್ಕೆ ತಾವೇ ಈ ಪುಸ್ತಕಗಳನ್ನು ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳುತ್ತಿದ್ದಾರೆ, ಆದರೆ ಇಬ್ಬರ ಡಿಸ್ಟ್ರಿಬ್ಯೂಟರ್ಗಳಿಗಾಗಿ ಅಂದರೆ ಗಾಟೆಮಾಲದಲ್ಲಿ ಒಬ್ಬರು ಮತ್ತು ಇನ್ನೊಬ್ಬರು ವೆನೆಜುಯೆಲಾದಲ್ಲಿರುವವರಿಗೆ, ಅದೇ ರೀತಿಯಾಗಿ ಮೆಕ್ಸಿಕೋನಲ್ಲಿರುವ ಜನರಿಗಾಗಿ ಪುಸ್ತಕಗಳನ್ನು ಸರಬರಾಜು ಮಾಡಲು ಮೆಕ್ಸಿಕೊನಲ್ಲಿ ನಮಗೆ ಸ್ವಂತವಾಗಿ ಒಂದು ಮುದ್ರಣಾಲಯವು ಇದೆ. ಅಗಾಗ್ಗೆ, ನಮ್ಮಲ್ಲಿರುವ ಪುಸ್ತಕಗಳನ್ನು ನಮ್ಮ ಪ್ರಧಾನ ಮುದ್ರಣಾಲಯದಿಂದ ಅನೇಕ ದೇಶಗಳಿಗೆ ನೌಕಯಾನ ಮಾರ್ಗದ ಮುಖಾಂತರ ಕಳುಹಿಸಿಕೊಡುತ್ತೇವೆ.
Guatemala: 5929-2602
pedidosguate@losninoscuentan.com